

ಸೊರಬ: ವೃತ್ತಿ ಬದುಕಿನಲ್ಲಿ ಲೋಪಗಳಿಲ್ಲದೆ ಕಾರ್ಯ ನಿರ್ವಹಿಸಿ ನಿವೃತ್ತರಾದ ಸಿ.ಪಿ.ಈಶ್ವರಪ್ಪ ಅವರ ಸೇವೆ ಅನನ್ಯ ಎಂದು ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಗುರುಭವನದಲ್ಲಿ ಅನುದಾನಿತ ಶ್ರೀ ರಂಗನಾಥ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕ ಸಿ.ಪಿ.ಈಶ್ವರಪ್ಪ ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರದಲ್ಲಿ ಮಾತನಾಡಿ, ಉತ್ತಮವಾಗಿ ಕೆಲಸ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ.ಪಿ.ಈಶ್ವರಪ್ಪ, ಕಷ್ಟದ ದಿನಗಳನ್ನು ಎದುರಿಸಿ ಬೆಳೆದ ನನಗೆ ಕುಟುಂಬ, ಶಾಲಾ ಆಡಳಿತ ಸಮಿತಿ ಹಾಗೂ ಸಮಾಜ ಸದಾ ಪ್ರೋತ್ಸಾಹ ನೀಡಿದೆ. ಶಾಲೆ, ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಕ್ರಿಯವಾಗಿ ಕೆಲಸ ನಿರ್ವಹಿಸುವ ಇಚ್ಛೆ ಇದೆ ಎಂದರು.
ಶಾಲಾ ಆಡಳಿತ ಸಮಿತಿ ಕಾನೂನು ಸಲಹೆಗಾರ ಚಂದ್ರು ಬಿ.ಕರೆಮ್ಮನವರ, ಬಸವರಾಜಪ್ಪ, ನಿವೃತ್ತ ಪಿಪಿ ವಿ.ಜಿ.ಯಳಗೇರಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಮಂಜುನಾಥ್, ಪಾಣಿ ರಾಜಪ್ಪ, ಉಪನ್ಯಾಸಕ ಡಾ. ಎಸ್.ಎಂ.ನೀಲೇಶ್, ಮುಖ್ಯಶಿಕ್ಷಕ ಚಂದ್ರಪ್ಪ, ಬಿಇಒ ಪುಷ್ಪಾ, ಚಿಂತಕ ರಾಜಪ್ಪ ಮಾಸ್ತರ್, ಬಿ.ಮಲ್ಲಿಕಾರ್ಜುನ ಇತರರಿದ್ದರು.