

Face pack : ಮೊಡವೆಗಳು ಸಾಮಾನ್ಯವಾಗಿ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವಂತಹ ಒಂದು ಚರ್ಮದ ಕಾಯಿಲೆಯಾಗಿದೆ. ಇದು ಭಾವನಾತ್ಮಕವಾಗಿ ಜನರನ್ನು ಯಾತನೆ ಅನುಭವಿಸುವಂತೆ ಮಾಡುತ್ತದೆ. ಲೆಕ್ಕವಿಲ್ಲದಷ್ಟು ಔಷಧಿಗಳು ಚಿಕಿತ್ಸೆ ನೀಡಲು ಮುಂದಾಗಿದ್ದರೂ, ಅವುಗಳಿಂದ ಭಯಗೊಂಡು ಕೈಗೆಟಕುವ ಹಾಗೂ ಸುಲಭ ಮನೆಮದ್ದುಗಳಿಗೆ ಪ್ರೇರಿತರಾಗಲು ಬಯಸುತ್ತಾರೆ. ಅಂದಹಾಗೇ ಮೊಡವೆಗಳನ್ನು ಕಡಿಮೆ ಮಾಡುವುದು ಹಾಗೂ ಪರಿಣಾಮಕಾರಿಯಾಗಿ ಚಿಕಿತ್ಸೆ ಪಡೆಯುವುದರ ಬಗ್ಗೆ ಕೆಲವೊಂದು ಸಲಹೆಗಳನ್ನು ಗಮನಿಸಿ...
ಮುಖದಲ್ಲಾಗುವ ಮೊಡವೆಗಳು ಬಹಳ ಕಾಲ ಹಾಗೇ ಉಳಿದು ಇವು ಕಲೆಗಳಾಗಿ ಪರಿಣಾಮಬೀರುತ್ತವೆ. ಇವುಗಳು ದೇಹದಲ್ಲಾಗುವ ಹಾರ್ಮೋನ್ಗಳ ಬದಲಾವಣೆಗಳು, ತೈಲ ಗ್ರಂಥಿಗಳ ಅಡಚಣೆ, ಅನುವಂಶಿಕತೆ, ಆಹಾರ ಪದ್ಧತಿ, ಒತ್ತಡ, ಔಷಧಿಗಳ ಪರಿಣಾಮ, ಪರಿಸರದ ಅಂಶಗಳು ಈ ರೀತಿಯ ಸಮಸ್ಯೆಗಳಿಂದ ಮೊಡವೆಗಳಾಗುತ್ತವೆ.
1 ಚಮಚ ದಾಲ್ಚಿನ್ನಿ ಪುಡಿಗೆ 2 ಚಮಚ ಜೇನುತುಪ್ಪವನ್ನು ಬೆರೆಸಿ ಮಿಶ್ರಣ ಮಾಡಿ. ಅದನ್ನು ಮೊಡವೆಗಳಿಗೆ ಹಚ್ಚಿ 10-15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಸ್ವಲ್ಪ ಬೆಚ್ಚಗಿರುವ ನೀರಿನಲ್ಲಿ ಮುಖ ತೊಳೆಯಿರಿ.
ಅರಿಶಿಣ ಪುಡಿಯನ್ನು ಜೇನುತುಪ್ಪದೊಂದಿಗೆ ಸೇರಿಸಿ ಮೊಡವೆಗಳ ಮೇಲೆ ಹಚ್ಚಿ 20 ನಿಮಿಷಗಳನ್ನು ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಆದಷ್ಟು ಮೊಡವೆಗಳು ಕಡಿಮೆಯಾಗಬಹುದು.
ತುಳಸಿ ಎಲೆಗಳ ರಸವನ್ನು ತೆಗೆದು ಮೊಡವೆಗೆ ಹಚ್ಚಿ 15-20 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಲ್ಲಿರುವ ಆಂಟಿಮೈಕ್ರೋಬಿಯಲ್ ಗುಣವು ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ.
ನಿಂಬೆ ರಸವನ್ನು ನೀರಿನೊಂದಿಗೆ ಬೆರೆಸಿ ಹತ್ತಿಯಿಂದ ಮೊಡವೆ ಆಗಿರುವ ಜಾಗಕ್ಕೆ ಹಚ್ಚುವುದರಿಂದ ಚರ್ಮವನ್ನು ಹೊಳಪಿಸಲು ಸಹಾಯ ಮಾಡುತ್ತದೆ.
2 ಚಮಚ ಮೊಸರಿಗೆ 1 ಚಮಚ ಅರಿಶಿಣ ಪುಡಿಯನ್ನು ಸೇರಿಸಿ ಮೊಡವೆಗೆ ಹಚ್ಚಿ 20 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಮೊಡವೆಗಳು ಕಮ್ಮಿಯಾಗುತ್ತದೆ.
ಕೆಲವು ಹನಿ ಗುಲಾಬಿ ಬೀಜದ ಹನಿಗಳನ್ನು ಹಾಕಿ 2 ನಿಮಿಷ ಚೆನ್ನಾಗಿ ಮಸಾಜ್ ಮಾಡಿ ಇದರಿಂದ ಚರ್ಮದ ವಿನ್ಯಾಸ ಸುಧಾರಣೆಯಾಗಿ, ಮೊಡವೆಗಳು ಕಡಿಮೆಯಾಗುತ್ತದೆ.
ಕಡಲೆ ಹಿಟ್ಟನ್ನು ರೋಸ್ ವಾಟರ್ನೊಮದಿಗೆ ಬೆರೆಸಿ 10-15 ನಿಮಿಷಗಳನ್ನು ಬಿಟ್ಟು ತೊಳೆಯುವುದರಿಂದ ಇದು ಮುಖದಲ್ಲಿನ ಎಣ್ಣೆಯನ್ನು ಹೀರಿಕೊಂಡು ಚರ್ಮವನ್ನು ಸ್ವಚ್ಚಗಿಡಲು ಸಹಾಯ ಮಾಡುತ್ತದೆ.
(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ