ಕಾಶ್ಮೀರದಲ್ಲಿ ಒಳನುಸುಳಲು ಯತ್ನಿಸಿದ ಉಗ್ರರಿಬ್ಬರನ್ನು ಬಗ್ಗುಬಡಿದ ಭಾರತೀಯ ಸೇನೆ! 5 ಭಯೋತ್ಪಾದಕರು ಅಡಗಿರುವ ಶಂಕೆ| terrorists

Indian Army
ಸಾಂದರ್ಭಿಕ ಚಿತ್ರ
Published on

terrorists : ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್​ ವಲಯದಲ್ಲಿ ನಿಯಂತ್ರಣ ರೇಖೆಯನ್ನು ದಾಟಿ ಒಳನುಸಳಲು ಪ್ರಯತ್ನಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನೆ ಗುರುವಾರ (ಆಗಸ್ಟ್​ 27) ಹೊರದುರುಳಿಸಿದೆ.

ಆಪರೇಷನ್​ ನೌಶೆರಾ ನಾರ್​ 4 ರ ಅಡಿಯಲ್ಲಿ ಎನ್​ಕೌಂಟರ್​ ನಡೆದಿದ್ದು, ಭಯೋತ್ಪಾದಕರು ಭಾರತದ ಪ್ರದೇಶಕ್ಕೆ ನುಸುಳಲು ಯತ್ನಿಸುತ್ತಿರುವುದನ್ನು ತಿಳಿದ ಭಾರತೀಯ ಸೈನ್ಯೆ ಗುಂಡಿನ ಚಕಮಕಿ ನಡೆಸಿ, ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಇನ್ನು ಐದು ಉಗ್ರರು ಈ ಪ್ರದೇಶದಲ್ಲಿ ಅಡಗಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತವಾಗಿದೆ.

ಬೆಳಿಗ್ಗೆ ಬೇರೆ ಯಾವುದೇ ನುಸುಳುಕಾರರು ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಸೇನೆಯು ತನ್ನ ಕಾರ್ಯಾಚರಣೆ ಮುಂದುವರೆಸಿದ್ದು, ಈ ವೇಳೆ ಕೊಲ್ಲಲ್ಪಟ್ಟ ಇಬ್ಬರು ಭಯೋತ್ಪಾದಕರ ಶವಗಳು ಪತ್ತೆಯಾಗಿದೆ. ಇದು ಭಾರತೀಯ ಸೇನೆ ನಡೆಸಿದ ಗುಂಡಿನ ದಾಳಿಗೆ ಬಳಿಯಾದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಯೋತ್ಪಾದಕರ ಒಳನುಸುಳುವಿಕೆಯ ಬಗ್ಗೆ ಜೆಕೆಪಿ ನೀಡಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಗುರೇಜ್​ ವಲಯದಲ್ಲಿ ಭಾರತೀಯ ಸೇನೆ ಹಾಗೂ @JmuKmrPolice ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದ್ದು, ಅನುಮಾನಾಸ್ಪದ ಚಟುವಟಿಕೆಗಳಿಗೆ ಸವಾಲು ಹಾಕಿದ್ದವು. ಈ ವೇಳೆ ಭಯೋತ್ಪಾದಕರ ಗುಂಪು ಅಪ್ರಜ್ಞಾಪೂರ್ವಕವಾಗಿ ಗುಂಡು ಹಾರಿಸಿದವು. ಆದರಿಂದ ಭಾರತೀಯ ಸೇನೆಯು ಗುಂಡಿನ ಚಕಮಕಿ ನಡೆಸಿ, ಇಬ್ಬರು ಭಯೋತ್ಪಾದಕರನ್ನು ನೆಲಕ್ಕುರುಳಿಸಿದೆ ಎಂದು ತನ್ನ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ.

ಬೇಸಿಗೆಯ ಸಮಯದಲ್ಲಿ ಗುರೆಜ್​, ಉರಿ ಹಾಗೂ ಕುಪ್ವಾರಾ ವಲಯಗಳಿಂದ ಹಲವಾರು ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಿಂದಿನಕ್ಕೆ ಹೋಲಿಕೆ ಮಾಡಿದರೆ, ಕಣಿವೆಯೊಳಗೆ ನುಸುಳುತ್ತಿರುವ ಉಗ್ರರ ಸಂಖ್ಯೆ ಬಹುಪಾಲು ಕಡಿಮೆಯಾಗಿದ್ದರೂ ಕೂಡ ಈ ರೀತಿ ಅಪಾಯಗಳು ಸಂಭವಿಸುತ್ತಲೇ ಇವೆ ಎಂದು ಹೇಳಿದ್ದಾರೆ.

ಕಾಶ್ಮೀರದಲ್ಲಿ ಕ್ಷೀಣಿಸುತ್ತಿರುವ ಉಗ್ರಗಾಮಿಗಳ ಸಂಖ್ಯೆಯನ್ನು ಹೆಚ್ಚಿಸಲು ಪಾಕಿಸ್ತಾನ ಮೂಲದ ಗುಂಪುಗಳು ಹೊಸ ಕಾರ್ಯಕರ್ತರನ್ನು ಸೇರಿಸಿಕೊಳ್ಳಲು ವಂಚಿತರಾಗಿವೆ. ಇತ್ತೀಚಿನ ದಿನಗಳಲ್ಲಿ ಒಳನುಸುಳುವಿಕೆ ಪ್ರಯತ್ನಗಳು ಆದಷ್ಟು ಕುಸಿತ ಕಂಡಿದೆ ಎಂದು ಹಿರಿಯ ಅಧಿಕಾರಿಗಳೊಬ್ಬರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net