ತಪ್ಪನ್ನೆಲ್ಲ ನಿರ್ಮಲಾ ಸೀತಾರಾಮನ್​ ಮೇಲೆ ಹೊರಿಸಿ.. ನೀವು ಪಾರಾಗಿ; ಪ್ರಧಾನಿ ಮೋದಿಗೆ ರಾಹುಲ್​ ಗಾಂಧಿ ಕೊಟ್ಟ 'ಆರ್ಥಿಕ' ಐಡಿಯಾ

Modi 5 Feb 20
Published on

ನವದೆಹಲಿ: ದೇಶದ ಆರ್ಥಿಕತೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಯವರು ಪ್ರಧಾನಿ ಮೋದಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.

ಇದೀಗ ನಿರ್ಮಲಾ ಸೀತಾರಾಮನ್​ ಮಂಡನೆ ಮಾಡಿರುವ ಬಜೆಟ್​ ಕೂಡ ಅನುಪಯುಕ್ತ ಎಂದು ಹೇಳಿರುವ ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಮೋದಿಯವರಿಗೆ ಒಂದು ವ್ಯಂಗ್ಯಭರಿತ ಸಲಹೆ ನೀಡಿದ್ದಾರೆ.

ಪ್ರೀತಿಯ ಪ್ರಧಾನಿಯವರೇ, ಆರ್ಥಿಕತೆ ಕುಸಿಯುತ್ತಿದೆ. ಇಡೀ ದೇಶ ನಿಮ್ಮನ್ನು ದೂಷಿಸುತ್ತಿದೆ. ಆ ಆಪಾದನೆಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದರ ಬಗ್ಗೆ ನೀವಿಗ ಖಂಡಿತ ಯೋಚನೆ ಮಾಡಬೇಕು. ಇದಕ್ಕೆ ನೀವು ನಿರ್ಮಲಾ ಸೀತಾರಾಮನ್​ ಮಂಡನೆ ಮಾಡಿರುವ ಬಜೆಟ್​ನ್ನು ಬಳಸಿಕೊಳ್ಳಿ. ನಮಗೆ ಸುಳಿವು ನೀಡದೆ ಇಂತಹ ಬಜೆಟ್​ ಮಂಡಿಸಿದ್ದಾರೆ. ಆರ್ಥಿಕತೆ ಕುಸಿತಕ್ಕೆ ಇದೇ ಕಾರಣ ಎಂದು ಸಂಪೂಣ್ ತಪ್ಪನ್ನು ಅವರ ಮೇಲೆ ಹೊರಿಸಿ. ಸಚಿವಸ್ಥಾನದಿಂದ ಅವರನ್ನು ಕೆಳಗಿಳಿಸಿ. ಆಗ ಸಮಸ್ಯೆ ಪರಿಹಾರ ಆಗುತ್ತದೆ ಎಂದು ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಹಿಂದಿನ ಬಜೆಟ್​ನ್ನು ಕೂಡ ರಾಹುಲ್​ ಗಾಂಧಿ ಟೀಕಿಸಿದ್ದರು. ಅಲ್ಲದೆ ಜಿಎಸ್​ಟಿಯನ್ನು ಗಬ್ಬರ್​ಸಿಂಗ್​ ಟ್ಯಾಕ್ಸ್​ ಎಂದು ವ್ಯಂಗ್ಯವಾಡಿದ್ದರು. ಈ ಬಾರಿಯ ಬಜೆಟ್​ನ್ನು ಕೂಡ ರಾಹುಲ್​ ಗಾಂಧಿ ವಿರೋಧಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net