ಸಾಲದ ಹಣ ಉದ್ದೇಶಿತ ಕಾರ್ಯಕ್ಕೆ ಬಳಸಿ

cooperation
ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಸಭೆಯನ್ನು ಅಧ್ಯಕ್ಷ ಎಂ.ಜಗದೀಶ್ ಉದ್ಘಾಟಿಸಿದರು. ಕೇಶವಮೂರ್ತಿ, ಗಂಗಮ್ಮ, ಯೋಗೀಶ್, ಲೋಕೇಶ್ ಇತರರಿದ್ದರು.
Published on

ಚಿಕ್ಕಮಗಳೂರು: ರೈತರು ಸಹಕಾರಿ ಸೌಲಭ್ಯಗಳನ್ನು ಪಡೆದು ಉದ್ದೇಶಿತ ಕಾರ್ಯಕ್ಕೇ ಬಳಕೆ ಮಾಡಿಕೊಂಡಾಗ ಮಾತ್ರ ಸಬಲರಾಗಲು ಸಾಧ್ಯ ಎಂದು ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಜಗದೀಶ್ ತಿಳಿಸಿದರು.

ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭೆಯಲ್ಲಿ ಮಾತನಾಡಿ, ಸಂಘದಿಂದ ರೈತರಿಗೆ 6 ಕೋಟಿ ರೂ. ಸಾಲ ನೀಡಲಾಗಿದ್ದು, ಪ್ರಾಮಾಣಿಕವಾಗಿ ಮರುಪಾವತಿ ಮಾಡುವ ಮೂಲಕ ಮತ್ತೊಬ್ಬರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಸಂಘದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಯಶಸ್ವಿನಿ ಯೋಜನೆಯನ್ನು ರಾಜ್ಯದಲ್ಲಿ ಮರು ಜಾರಿಗೆ ತಂದಿದ್ದು ಇದರ ಪ್ರಯೋಜನ ಪಡೆದುಕೊಳ್ಳಲು ಸದಸ್ಯರು ಕಡ್ಡಾಯವಾಗಿ ಯಶಸ್ವಿನಿಯಡಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಸಂಘದ ಕಟ್ಟಡ ಶಿಥಿಲಗೊಂಡಿದ್ದು ನೂತನ ಕಟ್ಟಡ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ. ಕುರುವಂಗಿ, ನೆಟ್ಟೆಕೆರೆಹಳ್ಳಿ ಹಾಗೂ ಮಲ್ಲೇದೇವರನಹಳ್ಳಿಯಲ್ಲಿ ಪಡಿತರ ವಿತರಣೆಗೆ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ನೂತನ ಮಳಿಗೆ ನಿರ್ಮಿಸಿ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷೆ ಗಂಗಮ್ಮ, ನಿರ್ದೇಶಕರಾದ ಎಚ್.ಕೆ.ಕೇಶವಮೂರ್ತಿ, ಎಚ್.ಎಂ.ಯೋಗೀಶ್, ಸಿ.ಎಲ್.ಲೋಕೇಶ್, ಎಚ್.ಸಿ.ಗಂಗಾಧರ್, ಎಂ.ಎನ್.ಮಲ್ಲುಂಡಪ್ಪ, ನೀಲಶೆಟ್ಟಿ, ಸಿ.ಎಸ್.ಸತೀಶ್, ಕೆ.ಆರ್.ಜಯಲಕ್ಷ್ಮೀ, ಮೇಲ್ವಿಚಾರಕ ಪವನ್‌ಗೌಡ, ಕಾರ್ಯದರ್ಶಿ ಆಶ್ರಿಕ್, ಮುಖಂಡ ಬಸವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net