ಅತ್ಯಮೂಲ್ಯ ನೀರನ್ನು ಮಿತವಾಗಿ ಬಳಸಿ

Published on

ಬಾಳೆಹೊನ್ನೂರು: ಪ್ರತಿ ಜೀವಿಗೂ ಕುಡಿಯುವ ನೀರು ಅತ್ಯಮೂಲ್ಯವಾಗಿದ್ದು ಮಿತವಾಗಿ ಬಳಸಬೇಕು ಎಂದು ಜೆಸಿಐ ಅಧ್ಯಕ್ಷ ಬಿ.ಎಸ್.ಅಜಿತ್ ಹೇಳಿದರು. ಮಾರ್ಕೆಟ್ ರಸ್ತೆಯ ಅಂಗನವಾಡಿಯಲ್ಲಿ ಭಾನುವಾರ ಜೆಸಿಐ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮದ ಅಂಗವಾಗಿ ವಾಟರ್ ಫಿಲ್ಟರ್ ಕೊಡುಗೆ ನೀಡಿ ಮಾತನಾಡಿದರು. ಎಲ್ಲರೂ ಶುದ್ಧ ನೀರು ಬಳಸಬೇಕೆಂಬ ಉದ್ದೇಶದಿಂದ ಜೇಸಿ ಸಪ್ತಾಹದ ಸಂದರ್ಭದಲ್ಲಿ ಅಂಗನವಾಡಿಗೆ ಕುಡಿಯುವ ನೀರಿನ ಫಿಲ್ಟರ್ ಕೊಡುಗೆಯಾಗಿ ನೀಡಲಾಗುತ್ತಿದೆ. ಪಟ್ಟಣದ ವಿವಿಧ ಹೋಟೆಲ್‌ಗಳಲ್ಲಿ ನೀರಿನ ಮಿತ ಬಳಕೆ ಫಲಕಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರು, ಗ್ರಾಹಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು. ಜೇಸಿ ಕಾರ್ಯದರ್ಶಿ ನಿಖಿಲ್ ಕಾನ್ಕೆರೆ, ಅಂಗನವಾಡಿ ಮೇಲ್ವಿಚಾರಕಿ ಪ್ರಕೃತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net