ಅತ್ಯಾಧುನಿಕ ಕ್ಷಿಪಣಿ ಬಳಕೆ

Untitled design (1)
Published on

ಸ್ಕಾಲ್ಪ್ (ಸ್ಟಾಮ್ರ್ ಶ್ಯಾಡೋ)

ಸ್ಕಾಲ್ಪ್ (ಸಿಸ್ಟಮ್ ಡಿ ಕ್ರೂಸಿಯರ್ ಆಟೋನೋಮ್ ಎ ಲಾಂಗ್ಯೂ ಪೋರ್ಟೀ) ಅನ್ನು ಸ್ಟಾಮ್ರ್ ಶ್ಯಾಡೋ ಎಂದು ಕರೆಯಲಾಗುತ್ತದೆ. ಈ ಕ್ಷಿಪಣಿಯನ್ನು ಯುರೋಪಿ ಯನ್ ಒಕ್ಕೂಟದ ಎಂಬಿಡಿಎ ಅಭಿವೃದ್ಧಿ ಪಡಿಸಿದೆ.

 ಈ ಕ್ಷಿಪಣಿ 5.1 ಮೀಟರ್ ಉದ್ದ ಮತ್ತು 1300 ಕೆ.ಜಿ. ತೂಕ ಇದ್ದು, 450 ಕೆ.ಜಿ. ತೂಕದ ಸ್ಪೊಟಕಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಫ್ರೆಂಚ್ ಮತ್ತು ಬ್ರಿಟಿಷ್ ವಾಯುಪಡೆಗಳು ಈ ಕ್ಷಿಪಣಿ ಬಳಸುತ್ತವೆ. ರಫೇಲ್, ಮಿರಾಜ್ 2000 ಮತ್ತು ಯೂರೋ ಫೈಟರ್ ಟೈಫೂನ್ ನಲ್ಲಿ ಬಳಸಬಹುದು.

ಇಂಟರ್ನಲ್ ನ್ಯಾವಿಗೇಷನ್ ಸಿಸ್ಟಮ್ (ಐಎನ್​ಎಸ್), ಜಿಪಿಎಸ್ ಮತ್ತು ಟೆರೇನ್ ರೆಫರೆನ್ಸಿಂಗ್ ನ್ಯಾವಿಗೇಷನ್ ಮತ್ತು ಟರ್ವಿುನಲ್ ಗೈಡೆನ್ಸ್​ಗಾಗಿ ಇನ್​ಫ್ರಾರೆಡ್ ಬಳಕೆ ಮಾಡುತ್ತದೆ. ರೆಡಾರ್ ನಲ್ಲಿ ಪತ್ತೆ ಹಚ್ಚಲು ಸಾಧ್ಯವಾಗದಂತೆ ಕಡಿಮೆ ಎತ್ತರದಲ್ಲಿ 0.8 ಮ್ಯಾಕ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

 ಈ ಕ್ಷಿಪಣಿ 250 ಕಿ.ಮೀ. ವ್ಯಾಪ್ತಿಯಲ್ಲಿ ಮೊದಲೇ ನಿಗದಿಪಡಿಸಿದ ಗುರಿಯನ್ನು ನಿಖರವಾಗಿ ತಲುಪುತ್ತದೆ. ಕೆಲವು ಸಂದರ್ಭದಲ್ಲಿ 560 ಕಿ.ಮೀ. ದೂರದ ಗುರಿಯ್ನೂ ಸಮರ್ಥವಾಗಿ ತಲುಪಿದೆ. ಇದರಿಂದಾಗಿ ಭಾರತದ ಗಡಿಯಿಂದ 100 ಕಿ.ಮೀ. ದೂರದಲ್ಲಿರುವ ಬಹಾವಲ್ಪುರದ ಉಗ್ರರ ನೆಲೆ ಮೇಲೆ ದಾಳಿ ನಡೆಸಲು ಸಾಧ್ಯವಾಗಿದೆ.

 ಅತ್ಯಾಧುನಿಕ ನ್ಯಾವಿಗೇಷನಲ್ ತಂತ್ರಜ್ಞಾನ ಬಳಸಿ ಗುರಿಯ ಕೆಲವೇ ಮೀಟರ್ ಅಂತರದಲ್ಲಿ ಅಪ್ಪಳಿಸುವ ಸಾಮರ್ಥ್ಯ ಹೊಂದಿದೆ. ಎಲ್ಲಾ ಹವಾಗುಣಗಳಲ್ಲಿ, ರಾತ್ರಿ ಮತ್ತು ಹಗಲಿನಲ್ಲಿ ಬಳಸಹುದಾದ ಈ ಕ್ಷಿಪಣಿಯಲ್ಲಿರುವ 450 ಕೆ.ಜಿ. ಸ್ಪೋಟಕ, ಬಂಕರ್​ಗಳು, ಕಮಾಂಡ್ ಸೆಂಟರ್ ಮತ್ತು ಶಸ್ತ್ರಾಸ್ತ್ರ ಡಿಪೋವನ್ನು ನಾಶಪಡಿಸಲು ಸಮರ್ಥವಾಗಿದೆ.

ಹ್ಯಾಮರ್ (ಎಎಎಸ್​ಎಂ)

 ಹ್ಯಾಮರ್ (ಹೈಲಿ ಅಗೈಲ್ ಮಾಡ್ಯುಲರ್ ಮ್ಯೂನಿಷನ್ ಎಕ್ಸ್​ಟೆಂಡೆಡ್ ರೇಂಜ್) ಕ್ಷಿಪಣಿಯನ್ನು ಆರ್ವೆಂಟ್ ಏರ್ ಸೋಲ್ ಮಾಡ್ಯುಲರ್ (ಎಎಎಸ್​ಎಂ) ಎಂದೂ ಕರೆಯುತ್ತಾರೆ. ಫ್ರಾನ್ಸ್​ನ ಸಫ್ರಾನ್ ಕಂಪನಿ ನಿರ್ವಿುಸಿರುವ ಈ ಕ್ಷಿಪಣಿಯನ್ನು 2007 ರಿಂದ ಫ್ರೆಂಚ್ ವಾಯುಪಡೆ, ನೌಕಾಪಡೆಯ ವಿಮಾನಗಳಲ್ಲಿ ಬಳಸಲಾಗುತ್ತಿದೆ. ಫ್ರಾನ್ಸ್ ನಿಂದ ಖರೀದಿಸಿರುವ ರಫೇಲ್ ಯುದ್ಧ ವಿಮಾನಗಳಲ್ಲಿ ಈ ಕ್ಷಿಪಣಿ ಬಳಸಲಾಗುತ್ತಿದೆ.

125, 250, 500 ಮತ್ತು 1000 ಕೆ.ಜಿ. ಬಾಂಬ್​ಗಳಿಗೆ ಈ ಕ್ಷಿಪಣಿಯನ್ನು ಬಳಸಬಹುದು. ಸಾಮಾನ್ಯವಾಗಿ 250 ಕೆ.ಜಿ. ತೂಕದ ಬಾಂಬ್​ಗಳಲ್ಲಿ ಬಳಕೆ ಮಾಡ ಲಾಗುತ್ತದೆ. ಈ ಕ್ಷಿಪಣಿ ರಾಕೆಟ್ ಬೂಸ್ಟರ್, ಜಿಪಿಎಸ್, ಇನ್​ಫ್ರಾರೆಡ್ ಅಥವಾ ಲೇಸರ್ ಗೈಡೆಡ್ ಕಿಟ್ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಲು ಮಡಚುವ ರೆಕ್ಕೆಗಳನ್ನು ಹೊಂದಿದೆ. ಕಡಿಮೆ ಮತ್ತು ಎತ್ತರದ ಪ್ರದೇಶದಿಂದ ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿದೆ.

 50-70 ವ್ಯಾಪ್ತಿಯಲ್ಲಿ ನಿಖರವಾಗಿ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ. ಮಾಡ್ಯುಲರ್ ಗೈಡೆಡ್ ವ್ಯವಸ್ಥೆ ಹೊಂದಿದ್ದು, ಕೆಲವೇ ಮೀಟರ್ ವ್ಯತ್ಯಾಸದೊಂದಿಗೆ ಗುರಿ ತಲುಪುತ್ತದೆ. ಇದು ಎಲೆಕ್ಟ್ರಿಕ್ ಜಾಮಿಂಗ್ ನಿರೋಧಕವಾಗಿದೆ. ಈ ಹಿನ್ನೆಲೆಯಲ್ಲಿ ಪಾಕ್ ಮಿಲಿಟರಿಯ ಕ್ಷಿಪಣಿ ನಿರೋಧದ ವ್ಯವ್ಯಸ್ಥೆಗಳು ಇರುವ ಪ್ರದೇಶದಲ್ಲಿ ಇರುವ ಉಗ್ರರ ನೆಲೆಗಳ ಮೇಲೆ ನಿಖರ ದಾಳಿ ನಡೆಸಲು ಸೂಕ್ತವಾದ ಕ್ಷಿಪಣಿ.

 ಬಂಕರ್​ಗಳು, ಬಹುಮಹಡಿ ಕಟ್ಟಡಗಳು ಮತ್ತು ಲಾಜಿಸ್ಟಿಕ್ ಕೇಂದ್ರಗಳ ಮೇಲೆ ದಾಳಿ ನಡೆಸಲು ಸೂಕ್ತವಾದ ಕ್ಷಿಪಣಿ ಇದಾಗಿದೆ. ಮಿರಾಜ್ 2000 ವಿಮಾನದ ಮೂಲಕ ಈ ಕ್ಷಿಪಣಿಯಿಂದ ಕೋಟ್ಲಿಯಲ್ಲಿ ಮಾರ್ಕಾಜ್ ಅಬ್ಬಾಸ್ ಮತ್ತು ಮುಜಫರಾಬಾದ್​ನಲ್ಲಿರುವ ಸೈಯಿದ್ನಾ ಬಿಲಾಲ್ ಮತ್ತು ಶವಾಯಿ ನಲ್ಲಾ ಕ್ಯಾಂಪ್ ಗಳ ಮೇಲೆ ದಾಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net