ಸಂಸತ್​ ಅಧಿವೇಶನಕ್ಕೆ ಬರುವ ಮಾಧ್ಯಮದವರು ಮೊಬೈಲ್​​ನಲ್ಲಿ ಬೈಟ್​ ಪಡೆಯುವ ಹಾಗಿಲ್ಲ...!

Parliment
Published on

ನವದೆಹಲಿ: ಕರೊನಾ ವೈರಸ್​ ಭಯದ ನಡುವೆಯೂ ನಾಳೆಯಿಂದ ಸಂಸತ್​ ಅಧಿವೇಶನ ಪ್ರಾರಂಭವಾಗಲಿದೆ. ಕರೊನಾ ಮುನ್ನೆಚ್ಚರಿಕೆಯಾಗಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಅದರ ಒಂದು ಭಾಗವಾಗಿ ಮಾಧ್ಯಮದವರು ಸಂಸದರು, ಸಚಿವರ ಬೈಟ್​​ (ಹೇಳಿಕೆ)ಗಳನ್ನು ಮೊಬೈಲ್​ಗಳ ಮೂಲಕ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ.

ಸಂಸತ್​ ಭವನದ ಸಂಕೀರ್ಣದ ಒಳಗೆ ಯಾವುದೇ ಮಾಧ್ಯಮದವರು ನೇರ ಪ್ರಸಾರಕ್ಕಾಗಿ ಸಚಿವರು, ಸಂಸದರ ಹೇಳಿಕೆಗಳನ್ನು ಮೊಬೈಲ್​ಗಳ ಮೂಲಕ ತೆಗೆದುಕೊಳ್ಳಬಾರದು ಎಂದು ಲೋಕಸಭಾ ಸಚಿವಾಲಯ ತಿಳಿಸಿದೆ. ಮಾಧ್ಯಮಗಳಿಗೂ ಈ ಬಗ್ಗೆ ಹೇಳಲಾಗಿದೆ. ಸಂಕೀರ್ಣದ ಒಳಗೆ ಮೊಬೈಲ್​ ಮೂಲಕ ಬೈಟ್​ ತೆಗೆದುಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹಾಗೇ ಮೊಬೈಲ್​ ಕ್ಯಾಮರಾ ಮೂಲಕವೇ ಕೆಲವರು ಲೈವ್​ ಕೊಡುತ್ತಾರೆ. ಈ ಬಾರಿ ಅದಕ್ಕೂ ಅವಕಾಶ ಇಲ್ಲ ಎಂದು ಇಂದು ಹೊರಡಿಸಿದ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹಾಗೇ ಮಾಧ್ಯಮ ಸಿಬ್ಬಂದಿ ಸಾಮಾಜಿಕ ಅಂತರ ನಿಯಮ ಪಾಲನೆ ಮಾಡಬೇಕು ಎಂದೂ ಹೇಳಲಾಗಿದೆ.

ಸೋಮವಾರ (ನಾಳೆ) ಬೆಳಗ್ಗೆ 9 ಗಂಟೆಯಿಂದ ಸಂಸತ್​ ಅಧಿವೇಶನ ಪ್ರಾರಂಭವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net