

ರಾವಂದೂರು: ಮಕ್ಕಳ ಕಲಿಕೆಗೆ ನೈಸರ್ಗಿಕವಾಗಿ ಸಿಗುವಂತಹ ವಸ್ತುಗಳನ್ನೇ ಕಲಿಕಾ ಸಾಮಗ್ರಿಗಳನ್ನಾಗಿ ಬಳಸುವಂತೆ ಬಿಆರ್‌ಪಿ ಶ್ರೀನಿಧಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕು ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಲಿ-ಕಲಿ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಕಲಿಕೆಗೆ ಶಿಕ್ಷಕರು ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳ ಕಲಿಕೆಗೆ ಪೂರಕ ವಾತಾವರಣವನ್ನು ಕಲ್ಪಿಸುವುದರ ಜತೆಗೆ ಕಸದಿಂದ ರಸ ಮಾಡುವ ಕಲೆಯನ್ನು ಮಕ್ಕಳಿಗೆ ಈಗಿನಿಂದಲೇ ನೀಡಬೇಕು ಎಂದರು.
ರಾವಂದೂರು, ಹಂಡಿತವಳ್ಳಿ, ಕಿತ್ತೂರು, ಅತ್ತಿಗೋಡು, ದೊಡ್ಡಬೇಲಾಳು, ಕ್ಲಸ್ಟರ್‌ಗಳ 75ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಪ್ರದೀಪ್, ಸಿ.ಸಿ.ಯಮುನಾ, ಮೋಹನ್‌ಕುಮಾರಿ, ರೇಖಾ, ನಳಿನಿ, ಸಿಆರ್‌ಪಿ ಸೋಮಶೇಖರ್, ನಾಗೇಶ್, ನಟರಾಜ್, ಗುರುರಾಘವೇಂದ್ರ, ಮುಖ್ಯ ಶಿಕ್ಷಕಿ ಲಿಲ್ಲಿಮೇರಿ ಇತರರು ಇದ್ದರು.