ಅಮೇರಿಕಾಕ್ಕೆ ವಾಪಸ್ಸಾದ ಕೆಇಆರ್‌ಸಿ ತಂಡ

Power Plant
Published on

ಬೆಂಗಳೂರು:
ಅಮೇರಿಕಾದಲ್ಲಿ ವಿದ್ಯುತ್ ಯೋಜನೆಗಳ ಅಧ್ಯಯನ ಮಾಡಲು ತೆರಳಿದ್ದ ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಮಂಡಳಿ (ಕೆಇಆರ್‌ಸಿ) ಅಧ್ಯಕ್ಷ ರವಿಕುಮಾರ್ ಅವರ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ವಾಪಸ್ಸಾಗಿದೆ.
ಕೆಇಆರ್‌ಸಿ ಸದಸ್ಯರಾದ ಮಂಜುನಾಥ್ ಮತ್ತು ರವಿ, ಕಾರ್ಯದರ್ಶಿ ವರಪ್ರಸಾದರೆಡ್ಡಿ ಹಾಗೂ ತಾಂತ್ರಿಕ ಸಮಿತಿ ಸದಸ್ಯರು ತಂಡದಲ್ಲಿದ್ದರು.
ಅಮೇರಿಕಾದಲ್ಲಿರುವ ಹಲವು ವಿದ್ಯುತ್ ಯೋಜನೆಗಳಿಗೆ ಹೋಲಿಕೆ ಮಾಡಿದರೆ ರಾಜ್ಯದ ವಿದ್ಯುತ್ ಯೋಜನೆಗಳು ಸಮಾನ ತಂತ್ರಜ್ಞಾನವನ್ನು ಹೊಂದಿವೆ ಮತ್ತು ಉತ್ತಮ ಗುಣಮಟ್ಟದಲ್ಲಿವೆ ಎಂದು ಕೆಇಆರ್‌ಸಿ ಅಧಿಕಾರಿಗಳ ತಂಡ ತಿಳಿಸಿದೆ.
ರಾಜ್ಯದ ಯೋಜನೆಗಳು ಮತ್ತು ಅಲ್ಲಿನ ವಿದ್ಯುತ್ ಯೋಜನೆಗಳ ಬಗ್ಗೆ ತುಲನೆ ಮಾಡಲಿರುವ ಈ ತಂಡ, ಎಲ್ಲೆಲ್ಲಿ ಹೊಸ ತಂತ್ರಜ್ಞಾನ ಅನುಸರಿಸಲು ಸಾಧ್ಯವಿದೆ ಮತ್ತು ನಿರ್ವಹಣೆಯಲ್ಲಿ ಏನೇನು ಸುಧಾರಣೆ ತರಲು ಸಾಧ್ಯವಿದೆ ಎನ್ನುವ ಬಗ್ಗೆ ಸರ್ಕಾರಕ್ಕೆ ಶಿಾರಸ್ಸು ನೀಡಲಿದೆ ಎಂದು ಕೆಇಆರ್‌ಸಿ ಮೂಲಗಳು ಖಚಿತಪಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net