

ಅಮೆರಿಕಾ: ನಿರುದ್ಯೋಗಿಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ. ವಿದ್ಯೆಗೆ ತಕ್ಕಂತೆ ಜಾಬ್ ಸಿಕ್ತಿಲ್ಲ ಅಂತ ಕೂತ್ರೆ ಮನೆಯಲ್ಲೇ ಇರ್ತೀರಿ. ಇದು ಡಿಜಿಟಲ್ ಯುಗ. ಇಲ್ಲಿ ಗಳಿಕೆಗೆ ನಾನಾ ದಾರಿ ಇದೆ. ಈ ಹುಡುಗಿಯಂತೆ ನಿಮಗೂ ಟ್ಯಾಲೆಂಟ್ ಇದ್ರೆ ಲಕ್ಷಗಟ್ಟಲೆ ಹಣ ಸಂಪಾದನೆ ಮಾಡ್ಬಹುದು .
25 ವರ್ಷದ ಹುಡುಗಿಯ ಹೆಸರು ಅಲೆಕ್ಸಾಂಡ್ರಾ ಹಾಲ್ಮನ್ ಮೊಬೈಲ್ನಲ್ಲಿ ಫೋಟೋ ತೆಗೆದು ಕಂಪನಿಗಳಿಗೆ ಮಾರುತ್ತಾಳೆ. ಇದರಿಂದ ಉತ್ತಮ ಹಣ ಸಂಪಾದನೆಯಾಗುತ್ತಿದೆ. ಅಲೆಕ್ಸಾಂಡ್ರಾ ಅವರು ತಮ್ಮ ಫೋಟೋ, ಸಾಮಾಜಿಕ ಮಾಧ್ಯಮ, ವೆಬ್‌ಸೈಟ್ ಮತ್ತು ಇತರ ಮಾಧ್ಯಮಗಳಂತಹ ವಿವಿಧ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಹೀರಾತುಗಳಾಗಿ ಬಳಸಲು ಕಂಪನಿಗೆ ಮಾರಾಟ ಮಾಡುತ್ತಾರೆ. ವಾರಕ್ಕೆ ಲಕ್ಷಗಟ್ಟಲೆ ಆದಾಯ ಗಳಿಸುತ್ತಾಳೆ.
ಸಿಯಾಟಲ್ ವಿಶ್ವವಿದ್ಯಾನಿಲಯದಿಂದ ಚಲನಚಿತ್ರ ನಿರ್ಮಾಣದಲ್ಲಿ ಪದವಿ ಪಡೆದ ನಂತರ,ಆಕೆ ಸ್ಥಳೀಯ ಕಾಫಿ ಶಾಪ್ ಮತ್ತು ರೆಸ್ಟೋರೆಂಟ್, ವರ್ಜಿನ್ ಗ್ಯಾಲಕ್ಟಿಕ್ ಮತ್ತು ಲೋರಿಯಲ್‌ನಂತಹ ದೊಡ್ಡ ಬ್ರಾಂಡ್‌ಗಳಿಗೆ ಕಂಟೆಂಟ್ ಸಿದ್ಧಪಡಿಸಿಕೊಡ್ತಿದ್ದಳು. ಆದ್ರೆ ಈ ಹಣ ಆಕೆಗೆ ಸಾಲ್ತಿರಲಿಲ್ಲ. ಬಾಡಿಗೆ ಮತ್ತು ದಿನಸಿಗಳನ್ನು ಪಾವತಿಸಲು ನಾನು ಮೂರು ಕೆಲಸಗಳನ್ನು ಮಾಡಬೇಕಾಯಿತು. ಮ್ಯಾಗಜೀನ್ ಮುಖಪುಟಕ್ಕೆ ಯೋಗ್ಯವಿರುವಂತಹ ಫೋಟೋಗಳನ್ನು ಅಲೆಕ್ಸಾಂಡ್ರಾ ಕ್ಲಿಕ್ಕಿಸುತ್ತಿದ್ದಳು. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಅಲೆಕ್ಸಾಂಡ್ರಾ ನಿರ್ಧರಿಸಿದಳು. ಸಾಮಾಜಿಕ ಜಾಲತಾಣದಲ್ಲಿ ಆಹಾರ, ಸಮುದ್ರ ಸೇರಿದಂತೆ ಸುತ್ತಲ ಪರಿಸರದ ಫೋಟೋಗಳನ್ನು ಹಾಕುವುದಲ್ಲದೆ ಅದಕ್ಕೆ ಸಂಬಂಧಿಸಿದ ಕಂಪನಿಗೆ ಟ್ಯಾಗ್ ಮಾಡ್ತಿದ್ದಳು.ಹೀಗಿರುವಾಗ ತಾನೇ ತೆಗೆದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಉಚಿತವಾಗಿ ಶೇರ್ ಮಾಡತೊಡಗಿದ. ಅವಳು ಆ ಫೋಟೋಗಳೊಂದಿಗೆ ಸಂಬಂಧಿತ ಬ್ರಾಂಡ್‌ಗಳನ್ನು ಟ್ಯಾಗ್ ಮಾಡಲು ಪ್ರಾರಂಭಿಸಿದಳು, ಹೋದಲ್ಲೆಲ್ಲಾ ಫೋಟೋಗಳನ್ನು ತೆಗೆಯಲು ಪ್ರಾರಂಭಿಸಿದಳು.
ಕ್ರಮೇಣ ಆ ಬ್ರ್ಯಾಂಡ್‌ಗಳು ಈಕೆ ಫೋಟೋಗಳನ್ನು ಬಳಸಲಾರಂಭಿಸಿದವು. ಆದರೆ ಈ ಗಳಿಕೆಗಳು ಆರಂಭದಲ್ಲಿ ಕಡಿಮೆ ಇತ್ತು. ಆದರೆ ನಂತೆ ಈಕೆ ಕ್ಲಿಕ್ಕಿಸಿದ ಫೋಟೋಗಳಿಗೆ ಎಲ್ಲಾ ಕಂಪನಿಗಳು ಉತ್ತಮ ಮೊತ್ತವನ್ನು ನೀಡ ತೊಡಗಿದವು. ಅನೇಕ ಕಾರ್ಯಕ್ರಮಗಳಿಗೆ ಆಹ್ವಾನಿಸುವ ಜನ ಅಲೆಕ್ಸಾಂಡ್ರಾಗೆ ಹಣ ನೀಡ್ತಿದ್ದಾರೆ. 5 ಸ್ಟಾರ್ ಹೋಟೆಲ್ ವಾಸ ಮತ್ತು ಕೆಲವೊಮ್ಮೆ ಒಮ್ಮೆ ಕಾರ್ಯಕ್ರಮಕ್ಕೆ ಹೋಗಲು ಹಣ ಸಿಗುತ್ತದೆ.
ಹೌ ಟು ಗೆಟ್ ಪೇಯ್ಡ್ ಟು ಟ್ರಾವೆಲ್ ಹೆಸರಿನ ಪುಸ್ತಕ ಬರೆದಿದ್ದಾಳೆ. ವೆಬ್ ಸೈಟ್ ಕೂಡ ಶುರು ಮಾಡಿದ್ದು, ಅದ್ರಲ್ಲಿ ಹೇಗೆ ಹಣ ಗಳಿಸಬಹುದು ಎಂಬ ಮಾಹಿತಿ ನೀಡ್ತಾರೆ. ಈ ಮಾಹಿತಿಗೆ ಅಲೆಕ್ಸಾಂಡ್ರಾ 800 ರೂಪಾಯಿ ಶುಲ್ಕ ಪಡೆಯುತ್ತಾರೆ. ಹೀಗೆ ಹಲವು ಮೂಲಗಳಿಂದ ಹಣ ಸಂಪಾದನೆ ಮಾಡುತ್ತಾಳೆ.