ವಿಟಮಿನ್ ಟ್ಯಾಬ್ಲೆಟ್ ಎಂದು ಭಾವಿಸಿ ಏರ್‌ಪಾಡ್ ನುಂಗಿದ ಮಹಿಳೆ!

US Woman Accidentally Swallows Apple AirPod Mistaking It For Vitamin Pill
Published on

ಅಮೆರಿಕಾ: ಮರೆತು ಒಂದು ಟ್ಯಾಬ್ಲೆಟ್ ಬದಲಿಗೆ ಇನ್ನೊಂದು ಟ್ಯಾಬ್ಲೆಟ್ ಸೇವಿಸುವವರ ಬಗ್ಗೆ ಕೇಳಿದ್ದೇವೆ. ವಿಟಮಿನ್ ಟ್ಯಾಬ್ಲೆಟ್ ಎಂದು ಭಾವಿಸಿ ಮಹಿಳೆ ಆಪಲ್ ಏರ್‌ಪಾಡ್ ಅನ್ನು ನುಂಗಿದ್ದಾರೆ. ನಂತರ ಮಹಿಳೆ ಸ್ಥಿತಿ ಏನಾಯ್ತು ಎನ್ನುವ ಕಂಪ್ಲಿಟ್​​ ಡಿಟೆಲ್ಸ್​​ ಇಲ್ಲಿದೆ....

ಉತಾಹ್‌ನ 52 ವರ್ಷದ ತನ್ನಾ ಬಾರ್ಕರ್ ಎಂಬ ಮಹಿಳೆ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿದ್ದಳು. ಅದೇ ಸಮಯದಲ್ಲಿ, ಅವಳು ವಿಟಮಿನ್ ಟ್ಯಾಬ್ಲೆಟ್ ತೆಗೆದುಕೊಳ್ಳಬೇಕು ಎಂದು ನೆನಪಾಗುತ್ತದೆ. ನಂತರ ಮಹಿಳೆ ತನ್ನಲ್ಲಿದ್ದ ನೀರಿನಿಂದ ಏರ್ಪಾಡ್ ಅನ್ನು ನುಂಗಿದಳು. ಬಳಿಕ ಕೈಯಲ್ಲಿ ಮಾತ್ರೆಗಳಿದ್ದವು. ತಾನು ಏರ್‌ಪಾಡ್‌ ನುಂಗಿದ್ದೇನೆ ಎಂದು ಅರಿವಾಯಿತು. ತಕ್ಷಣ ವೈದ್ಯರ ಬಳಿ ಓಡಿದ್ದಾಳೆ.

ಆ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಏರ್‌ಪಾಡ್‌ಗಳು ಸ್ವಾಭಾವಿಕವಾಗಿ ಹೊರಬರಬೇಕು ಎಂದು ಸೂಚಿಸಿದರು. ನಂತರ ವೈದ್ಯರ ಸಲಹೆ ಮೇರೆಗೆ ಮನೆಗೆ ಬಂದಿದ್ದಾಳೆ. ವೈದ್ಯರು ಹೇಳಿದಂತೆ ಆರೋಗ್ಯದ ಕುರಿತಾಗಿ ಎಚ್ಚರಿಕೆ ವಹಸಿದ್ದಾಳೆ.

ಯಾರಿಗಾದರೂ ಅಂತಹ ಅನುಭವವಾಗಿದೆಯೇ ಎಂದು ತನಗೆ ತಿಳಿದಿಲ್ಲ,ಏನಾಗುತ್ತದೆ ಎಂದು ನೋಡಬೇಕೆಂದು ಸೋಶಿಯಲ್​​ ಮೀಡಿಯಾದಲ್ಲಿ ವೀಡಿಯೋ ಮಾಡಿ ಬಾರ್ಕರ್ ಹೇಳುತ್ತಾಳೆ. ಬಾರ್ಕರ್ ಅವರ ಏರ್‌ಪಾಡ್ ನುಂಗಿರುವುದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net