ರಾಜತಾಂತ್ರಿಕರ ವಾಪಸ್​ಗೆ ಒತ್ತಾಯ ಬೇಡ: ಭಾರತಕ್ಕೆ ಯುಎಸ್, ಯುಕೆ ಒತ್ತಾಯ

canada
Published on

ವಾಷಿಂಗ್ಟನ್: ಖಲಿಸ್ತಾನ್​ ಪ್ರತ್ಯೇಕತಾವಾದಿ ಹರ್ಪ್ರೀತ್​ ಸಿಂಗ್​ ನಿಜ್ಜರ್​ ಹತ್ಯೆ ಬಳಿಕ ಭಾರತ - ಕೆನಡಾ ನಡುವೆ ಭುಗಿಲೆದ್ದ ವಿವಾದ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಒಟ್ಟಾವಾ 41 ರಾಜತಾಂತ್ರಿಕರನ್ನು ಹಿಂದೆಗೆದುಕೊಂಡ ನಂತರ ಕೆನಡಾದ ಇನ್ನಷ್ಟು ರಾಜತಾಂತ್ರಿಕರ ಉಪಸ್ಥಿತಿಯನ್ನು ಕಡಿಮೆ ಮಾಡುವಂತೆ ಒತ್ತಾಯಿಸಬೇಡಿ ಎಂದು ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್ ಶುಕ್ರವಾರ ಭಾರತವನ್ನು ಒತ್ತಾಯಿಸಿವೆ. ಅಷ್ಟೇ ಅಲ್ಲ ಎರಡು ಪ್ರಮುಖ ದೇಶಗಳ ಸಂಬಂಧ ಹದಗೆಡುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿವೆ.

ನಡಾದ ಪ್ರಜೆ ಮತ್ತು ಖಲಿಸ್ತಾನ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಕಳೆದ ಜೂನ್‌ನಲ್ಲಿ ವ್ಯಾಂಕೋವರ್ ಉಪನಗರದಲ್ಲಿ ಹತ್ಯೆಗೀಡಾಗಿದ್ದ. ಇದರ ಹಿಂದೆ ಭಾರತೀಯರ ಕೈವಾಡವಿದೆ ಎಂದು ಕೆನಡಾ ಆರೋಪಿಸಿತ್ತು. ಈ ಆರೋಪವನ್ನು ಭಾರತ ನಿರಾಕರಿಸಿತು. ಆದರೆ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಪದೇ ಪದೆ ಭಾರತದ ಮೇಲೆ ಆರೋಪಗಳನ್ನು ಮಾಡುತ್ತ ಬಂದಿದ್ದರಿಂದ ಎರಡು ದೇಶಗಳ ನಡುವೆ ಸಂಬಂಧ ಹದಟೆಟ್ಟು ಭಾರತದ ರಾಜತಾಂತ್ರಿಕರನ್ನು ಕೆನಡಾ ಹೊರಹೋಗುವಂತೆ ಸೂಚಿಸಿತ್ತು. ಇದಕ್ಕೆ ಪ್ರತಿಯಾಗಿ "ಭಾರತದಲ್ಲಿನ ಹಲವು ನಗರಗಳಲ್ಲಿನ ತನ್ನ ರಾಜತಾಂತ್ರಿಕರನ್ನು ವಾಪಸ್​ ಕರೆಸಿಕೊಳ್ಳಲು ಭಾರತ ಒತ್ತಾಯಿಸಿತ್ತು. ಆದರೆ ಕೆನಡಾ ಬಹುತೇಕ ರಾಜತಾಂತ್ರಿಕನ್ನು ವಾಪಸ್​ ಕರೆಸಿಕೊಂಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್, ಭಾರತದಿಂದ ಕೆನಡಾ ರಾಜತಾಂತ್ರಿಕರು ನಿರ್ಗಮಿಸುವ ಬಗ್ಗೆ ನಾವು ಕಳವಳಗೊಂಡಿದ್ದೇವೆ. ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ರಾಜತಾಂತ್ರಿಕರ ಅಗತ್ಯವಿದೆ. ನಿಜ್ಜರ್ ಹತ್ಯೆ ಸಂಬಂಧ ಕೆನಡಾದ ತನಿಖೆಗೆ ಸಹಕರಿಸಲು ನಾವು ಭಾರತವನ್ನು ಒತ್ತಾಯಿಸಿದ್ದೇವೆ. ರಾಜತಾಂತ್ರಿಕ ಸಂಬಂಧಗಳ ಮೇಲಿನ 1961 ರ ವಿಯೆನ್ನಾ ಒಪ್ಪಂದದ ಅಡಿಯಲ್ಲಿ ಭಾರತವು ತನ್ನ ಜವಾಬ್ದಾರಿಗಳನ್ನು ಎತ್ತಿಹಿಡಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ.

ಇನ್ನು "ಕೆನಡಾದ ಹಲವು ರಾಜತಾಂತ್ರಿಕರು ಭಾರತವನ್ನು ತೊರೆಯಲು ಕಾರಣವಾದ ಕೇಂದ್ರದ ತೆಗೆದುಕೊಂಡ ನಿರ್ಧಾರಗಳನ್ನು ನಾವು ಒಪ್ಪುವುದಿಲ್ಲ" ಎಂದು ಬ್ರಿಟನ್‌ ವಿದೇಶಾಂಗ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಪಾಶ್ಚಿಮಾತ್ಯ ಶಕ್ತಿಗಳು ಭಾರತವನ್ನು ಬಹಿರಂಗವಾಗಿ ಖಂಡಿಸಲು ಹಿಂಜರಿಯುತ್ತಿದ್ದರೂ ಸಹ, ಕೆನಡಾದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ವಾಷಿಂಗ್ಟನ್ ಮತ್ತು ಲಂಡನ್ ಹೇಳುತ್ತಿರುವುದು ನೋಡಿದರೆ ಭಾರತದೊಂದಿಗಿನ ಬಾಂಧವ್ಯವನ್ನು ಈ ದೇಶಗಳು ಹಾಳುಮಾಡಲು ಬಯಸುವುದಿಲ್ಲ, ಏಷ್ಯಾದ ಪ್ರತಿಸ್ಪರ್ಧಿ ಚೀನಾಕ್ಕೆ ಪ್ರತಿಸ್ಪರ್ಧಿಯಾಗಿರುವ ಭಾರತದೊಂದಿಗೆ ತಮ್ಮ ಇತರ ಮಿತ್ರ ದೇಶಗಳು ಸಹ ಉತ್ತಮ ಸಂಬಂಧ ಹೊಂದಿರಬೇಕೆಂದು ಬಯಸುವುದಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net