ಖಾಸಿಂ ಸುಲೇಮಾನಿಯನ್ನು ಹತ್ಯೆಗೈದ ಅದೇ ದಿನ ಯೆಮೆನ್​ನಲ್ಲಿ ಇನ್ನೋರ್ವ ಇರಾನಿಯನ್ ಸೇನಾಧಿಕಾರಿಯ ಹತ್ಯೆಗೆ ಅಮೆರಿಕ ಪ್ರಯತ್ನಿಸಿತ್ತು!

donal trump
Published on

ವಾಷಿಂಗ್ಟನ್​: ಇರಾನ್​ನ ಜನರಲ್​ ಖಾಸಿಂ ಸುಲೇಮಾನಿ ಅವರ ಹತ್ಯೆ ನಡೆಸಿದ ಅದೇ ದಿನ ಯೆಮೆನ್​ನಲ್ಲಿ ಇದ್ದ ಇನ್ನೊಬ್ಬ ಇರಾನ್​ ಸೇನಾಧಿಕಾರಿಯನ್ನು ಹತ್ಯೆ ಮಾಡಲು ಅಮೆರಿಕ ಪ್ರಯ್ನಿಸಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ದ ನ್ಯೂಯಾರ್ಕ್​ ಟೈಮ್ಸ್ ಪತ್ರಿಕೆ ಅಮೆರಿಕದ ಸೇನಾಧಿಕಾರಿಗಳನ್ನು ಉಲ್ಲೇಖಿಸಿ ಈ ಕುರಿತ ವರದಿಯನ್ನು ಪ್ರಕಟಿಸಿದೆ. ಇರಾನ್​ನ ಪ್ರಭಾವಿ ಸೇನಾ ದಂಢನಾಯಕ ಜನರಲ್ ಖಾಸಿಂ ಸುಲೇಮಾನಿ ಅವರನ್ನು ಹತ್ಯೆ ಮಾಡಿದ ದಿನ(ಜನವರಿ 3)ವೇ ಯೆಮೆನ್​ನಲ್ಲಿ ನಡೆಸಿದ ಇನ್ನೊಂದು ಪ್ರಯತ್ನದಲ್ಲಿ ಅಮೆರಿಕ ಯಶಸ್ವಿಯಾಗಲಿಲ್ಲ. ಇರಾನಿನ ಖುಡ್ಸ್​ ಫೋರ್ಸ್​ನ ಅಧಿಕಾರಿ ಅಬ್ದುಲ್ ರೇಜಾ ಶಹಲಾಯ್​ ಯೆಮೆನ್​ನಲ್ಲಿ ಅಮೆರಿಕದ ಟಾರ್ಗೆಟ್ ಆಗಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ ಇರಾನ್ ನಡೆಸಿದ ಕ್ಷಿಪಣಿ ದಾಳಿಯ ಪರಿಣಾಮ, ಬಹುದೊಡ್ಡ ಸಂಘರ್ಷ ಏರ್ಪಡುವ ಸಂಭಾವ್ಯತೆ ಗೋಚರಿಸಿತ್ತು. ಕೂಡಲೇ ಎಚ್ಚೆತ್ತುಕೊಂಡ ಉಭಯ ದೇಶಗಳ ನಾಯಕರು ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನಕ್ಕೆ ಮುಂದಾದರೂ, ಹಗೆ ಹೊಗೆಯಾಡುತ್ತಿರುವುದು ವಾಸ್ತವ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net