ಭಾರತಕ್ಕೆ ಮುಂದಿನ ವಾರ ತಲುಪಲಿದೆ ಅಮೆರಿಕದ 100 ವೆಂಟಿಲೇಟರ್​

Modi And Trumph vvani
Published on

ವಾಷಿಂಗ್ಟನ್​: ಅಮೆರಿಕ ವಾಗ್ದಾನ ಮಾಡಿದ ವೆಂಟಿಲೇಟರ್​ಗಳ ಪೈಕಿ ಮೊದಲ ಹಂತದ 100 ವೆಂಟಿಲೇಟರ್​ಗಳು ಮುಂದಿನ ವಾರ ಭಾರತಕ್ಕೆ ತಲುಪಲಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ತಿಳಿಸಿದ್ದಾಗಿ ವೈಟ್​ಹೌಸ್ ಹೇಳಿದೆ.

ಅಧ್ಯಕ್ಷ ಟ್ರಂಪ್ ಅವರು ಮೋದಿ ಅವರೊಂದಿಗೆ ಕಾನ್ಫರೆನ್ಸ್ ಕರೆ ಮೂಲಕ ಮಾತನಾಡಿದ್ದು, ಇಬ್ಬರೂ ನಾಯಕರು ಜಿ7 ಸಭೆ, ಕೋವಿಡ್​19 ಸ್ಥಿತಿಗತಿ, ಪ್ರಾದೇಶಿಕ ಭದ್ರತಾ ವಿಷಯಗಳ ಕುರಿತು ಚರ್ಚಿಸಿದ್ದಾರೆ. ಈ ಹಿಂದೆ ವಾಗ್ದಾನ ಮಾಡಿದ್ದ ವೆಂಟಿಲೇಟರ್​ಗಳ ಪೈಕಿ 100ರ ಮೊದಲ ಕಂತನ್ನು ಹಡಗಿಗೆ ಏರಿಸಿದ್ದು, ಅಮೆರಿಕ ಬಿಡುತ್ತಿದೆ. ಇದು ಮುಂದಿನ ವಾರ ಭಾರತಕ್ಕೆ ತಲುಪಲಿದೆ ಎಂಬ ಮಾಹಿತಿಯನ್ನೂ ಮೋದಿಯವರಿಗೆ ಟ್ರಂಪ್ ನೀಡಿದ್ದಾಗಿ ವೈಟ್​ಹೌಸ್​ ತಿಳಿಸಿದೆ.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸರಣಿ ಟ್ವೀಟ್ ಮೂಲಕ ಟ್ರಂಪ್​ ಜತೆಗಿನ ಮಾತುಕತೆಯ ಅಂಶಗಳನ್ನು ಬಹಿರಂಗಪಡಿಸಿದ್ದರು. ಅಲ್ಲದೆ, ಟ್ರಂಪ್ ಅವರನ್ನು ಮತ್ತೆ ಫ್ರೆಂಡ್ ಎಂದು ಸಂಬೋಧಿಸಿ ಫಲಪ್ರದವಾದ ಮಾತುಕತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net