ವಿಡಿಯೋ: ಜಾರಿ ಬಿದ್ದ ಜಾಣ ಅಮೆರಿಕ ಅಧ್ಯಕ್ಷ ಜೊ ಬೈಡನ್!

joe
Published on

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರು ವಿಮಾನ ಹತ್ತುವ ವೇಳೆ ಮೆಟ್ಟಿಲುಗಳಿಂದ ಮೂರು ಬಾರಿ ಜಾರಿ ಬಿದ್ದಿರುವ ಘಟನೆ ಶುಕ್ರವಾರ ಆಂಡ್ರೋ ಏರ್​ಬೇಸ್​ನಲ್ಲಿ ನಡೆದಿದೆ.

ಏರ್​​ಪೋರ್ಸ್​​ ಒನ್​ ವಿಮಾನ ಹತ್ತುವಾಗ ಅಮೆರಿಕ ಅಧ್ಯಕ್ಷರು ಎಂದಿನಂತೆ ಸಹಜವಾಗಿ ಲವಲವಿಕೆಯಿಂದ ಹತ್ತುತ್ತಿದ್ದರು. ಈ ವೇಳೆ ಮೊದಲ ಬಾರಿಗೆ ಮೆಟ್ಟಿಲುಗಳನ್ನು ಎಡವಿದ ಅವರು ಮತ್ತದೆ ಎರಡು ಸಲ ಪುನಾರ್ವತನೆ ಮಾಡಿದರು. ಆದರೂ ಸಾವರಿಸಿಕೊಂಡು ಕ್ಯಾಬಿನ್​ಗೆ ತೆರಳಿ ಏನೂ ಆಗಿಲ್ಲವಂತೆ ಕೈ ಬೀಸಿ ವಿಮಾನದೊಳಗೆ ಪ್ರವೇಶಿಸಿದರು.

78 ವರ್ಷದ ಜೋ ಬೈಡನ್ ಅವರು ಎಡವಿ ಬಿದ್ದರೂ ತಮ್ಮ ವೈದ್ಯಕೀಯ ಸಿಬ್ಬಂದಿಗೆ ಕರೆ ಮಾಡದಿರುವುದು ಅಚ್ಚರಿ ಮೂಡಿಸಿತು. ಅಲ್ಲದೇ ಅವರು ವಿರೋಧಿಗಳು ಈ ಘಟನೆಯನ್ನು ಅವರನ್ನು ಟೀಕಿಸಲು ಬಳಸಿಕೊಂಡಿದ್ದಾರೆ. ಅಧ್ಯಕ್ಷರಿಗೆ ವಯಸ್ಸಾಗಿದೆ, ನಡೆಯುವುದೂ ಕಷ್ಟ ಎಂದು ಗೇಲಿ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net