

Charlie Kirk : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಮಿತ್ರ ಚಾರ್ಲಿ ಕಿರ್ಕ್ ಅವರನ್ನು ಗುರುವಾರ(ಸೆ.11) ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಟರ್ನಿಂಗ್ ಪಾಯಿಂಟ್ ಅಮೆರಿಕದ ಸಂಸ್ಥಾಪಕ ಚಾರ್ಲಿ ಕಿರ್ಕ್ ದುಷ್ಕರ್ಮಿ ಹಾರಿಸಿದ ಒಂದೇ ಒಂದು ಗುಂಡಿಗೆ ಬಲಿಯಾಗಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಈ ಕುರಿತು ಡೊನಾಲ್ಡ್ ಟ್ರಂಪ್ ಅವರು ಕಿರ್ಕ್ ನಿಧನರಾಗಿದ್ದಾರೆ ಎಂದು ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ನಲ್ಲಿ ದೃಢಪಡಿಸಿದರು.
ಈ ಗುಂಡಿನ ದಾಳಿಯ ನಂತರ, ಭಾಷಣ ಮಾಡುತ್ತಿದ್ದ ವಿವಿ ಕ್ಯಾಂಪಸ್ನ್ನೂ ಫೂರ್ತಿ ಸೀಲ್ ಮಾಡಿದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಕಿರ್ಕ್ ಮಾತನಾಡುವಾಗ ಗುಂಡು ಹಾರಿಸುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ ಕಂಡುಬಂದಿದೆ.(ಏಜೆನ್ಸೀಸ್)