ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಫೆಬ್ರವರಿಯಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ: ಗುಜರಾತ್​ ಮುಖ್ಯಮಂತ್ರಿ ರೂಪಾನಿ ಮಾಹಿತಿ

RUPANI
Published on

ನವದೆಹಲಿ: ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಫೆಬ್ರವರಿಯಲ್ಲಿ ಸಬರಮತಿ ನದಿ ತೀರಕ್ಕೆ ಭೇಟಿ ನೀಡಲಿದ್ದಾರೆ ಎಂದು ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾನಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತಾಡಿದ ರೂಪಾನಿ ಅವರು, ಜಪಾನ್​ ಮತ್ತು ಇಸ್ರೇಲ್​ ಅಧ್ಯಕ್ಷರು ಭೇಟಿ ನೀಡಿದಂತೆ ಸಬರಮತಿ ನದಿ ತೀರವನ್ನು ಟ್ರಂಪ್​ ಕೂಡ ವೀಕ್ಷಿಸಲಿದ್ದಾರೆ ಎಂದರು.

ಪ್ರಧಾನಿ ಮೋದಿ ಅವರ ಪರಿಶ್ರಮದಿಂದ ಸಬರಮತಿ ನದಿ ತೀರ ಏಷ್ಯಾದಲ್ಲೇ ಅತಿ ಸ್ವಚ್ಛವಾಗಿರುವ ನದಿ ಎಂದು ಹೆದರಾಗಿದೆ. ಅಲ್ಲಿಗೆ ಭೇಟಿ ನೀಡಿದ್ದ ಜಪಾನ್​ ಮತ್ತು ಇಸ್ರೇಲ್​ ಅಧ್ಯಕ್ಷರು ಆಶ್ಚರ್ಯಚಕಿತರಾಗಿದ್ದರು. ಈಗ ಟ್ರಂಪ್​ ಅವರ ಸರದಿ ಎಂದಿದ್ದಾರೆ.

ಆದರೆ ರೂಪಾನಿ ಅವರು ಟ್ರಂಪ್​ ಫೆಬ್ರವರಿಯಲ್ಲಿ ಭೇಟಿ ನೀಡಲಿದ್ದಾರೆ ಎಂದಿದ್ದಾರೆ ಹೊರತು ಅವರ ಆಗಮನದ ನಿಖರ ದಿನವನ್ನು ತಿಳಿಸಲಿಲ್ಲ. ಈ ಮುಂಚೆ ಅಮೆರಿಕ ಮತ್ತು ಭಾರತೀಯ ಅಧಿಕಾರಿಗಳು ಟ್ರಂಪ್​ ಭಾರತಕ್ಕೆ ಆಗಮಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದರು.

ಈ ಮೊದಲಿನ ವರದಿಗಳ ಪ್ರಕಾರ ಟ್ರಂಪ್​ ಅವರನ್ನು ಗಣರಾಜ್ಯೋತ್ಸವ ಪರೇಡ್​ಗೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಕೇಳಲಾಗಿತ್ತು. ಆದರೆ ಅವರ ದಿನಚರಿಗಳಲ್ಲಿ ಜನವರಿ 24 ರಿಂದ 26 ದಿನಗಳಲ್ಲಿ ಬಿಡುವು ಇರಲಿಲ್ಲ. ಹಾಗಾಗಿ ಅವರ ಭೇಟಿ ಸಾಧ್ಯವಾಗಿರಲಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net