PHOTOS| ಔತಣಕೂಟದಲ್ಲಿ ಭಾಗಿಯಾಗಿರೋ ಸಿಎಂ ಬಿಎಸ್​ವೈ ಸೇರಿ ವಿವಿಧ ಗಣ್ಯರನ್ನು ಪರಿಚಯಿಸಿಕೊಂಡ ಟ್ರಂಪ್​ ದಂಪತಿ

Trump BSY
Published on

ನವದೆಹಲಿ: ಎರಡು ದಿನಗಳ ಭಾರತ ಪ್ರವಾಸದ ಅಂತಿಮ ದಿನವಾದ ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್​ ರಾಷ್ಟ್ರಪತಿ ಭವನದ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.

ಟ್ರಂಪ್​ ದಂಪತಿ ಗೌರವಾರ್ಥ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಔತಣಕೂಟ ಏರ್ಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಹಾಗೂ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸೇರಿದಂತೆ ವಿವಿಧ ಗಣ್ಯರು ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.

ಈ ವೇಳೆ ಟ್ರಂಪ್​ ದಂಪತಿ ಔತಣಕೂಟದಲ್ಲಿ ಭಾಗಿಯಾಗಿರುವ ಗಣ್ಯರೊಂದಿಗೆ ಹಸ್ತಲಾಘವ ಮಾಡುವುದರೊಂದಿಗೆ ಖುದ್ದಾಗಿ ಪರಿಚಯಿಸಿಕೊಂಡಿದ್ದು ವಿಶೇಷವಾಗಿತ್ತು.

ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್​, ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್​ ಮತ್ತು ಹರಿಯಾಣ ಸಿಎಂ ಮನೋಹರ್​ ಲಾಲ್​ ಕಟ್ಟರ್​ ಸೇರಿದಂತೆ ಕೇಂದ್ರದ ಸಚಿವರು ಭಾಗಿಯಾಗಿದ್ದಾರೆ. ಅಲ್ಲದೆ, ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ ಹಾಗೂ ಪ್ರಸಿದ್ಧ ಶೆಫ್ ವಿಕಾಸ್​ ಖನ್ನಾ ಕೂಡ ಉಪಸ್ಥಿತರಿದ್ದಾರೆ.​

ಇದಕ್ಕೂ ಮುನ್ನ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಟ್ರಂಪ್​ ದಂಪತಿಯನ್ನು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಮತ್ತು ಪತ್ನಿ ಸವಿತಾ ಕೋವಿಂದ್​ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಔತಣಕೂಟ ಮುಗಿದ ಬಳಿಕ ಟ್ರಂಪ್​ ದಂಪತಿ ರಾತ್ರಿ 10 ಗಂಟೆಗೆ ಅಮೆರಿಕಗೆ ನಿರ್ಗಮಿಸಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net