ವಿಶ್ವದಲ್ಲೇ ಅತಿ ಹೆಚ್ಚು ಟ್ಯಾಟೂ ಹೊಂದಿರುವ ಮಹಿಳೆ ಇವರೇ ನೋಡಿ; ಗಿನ್ನಿಸ್​ ರೆಕಾರ್ಡ್​​ ಸೇರಿದ ಎಸ್ಪೆರೆನ್ಸ್​​ ಫರ್ಜಿನಾ ಹೇಳಿದಿಷ್ಟು..

Untitled-design-2024-08-23T191110.616
Published on

ವಾಷಿಂಗ್ಟನ್​​ಡಿಸಿ: ವಿಶಿಷ್ಟ ಹಾಗೂ ಅದ್ಭುತ ವಿಷಯಗಳನ್ನು ಯಾವಾಗಲೂ ಗಿನ್ನೆಸ್​ ರೆಕಾರ್ಡ್​​​ನಲ್ಲಿ ಸಾಧನೆಯಾಗಿ ಸೇರಿಸಲಾಗುತ್ತದೆ. ಈ ಬಾರಿ ಮಹಿಳೆಯೊಬ್ಬರು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ವಿಶ್ವ ದಾಖಲೆಯಲ್ಲಿ ಸೇರ್ಪಡೆಯಾಗಿದ್ದಾರೆ.

ಅಮೆರಿಕದ ಆರ್ಮಿ ಅನುಭವಿ ಎಸ್ಪೆರೆನ್ಸ್​​ ಲುಮಿನೆಸ್ಕಾ ಫರ್ಜಿನಾ(36) ಅವರು ದೇಹದ ಶೇ.99.8 ಭಾಗಗಳಲ್ಲಿ ಹಚ್ಚೆಹಾಕಿಸಿಕೊಂಡಿದ್ದಾರೆ. ಟ್ಯಾಟೂ ವಿಚಾರವಾಗಿ ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿರುವುದು ಒಂದು ಸಾಧನೆ ಎಂದು ಪರಿಗಣಿಸಲಾಗಿದೆ. ಮಹಿಳೆಯು ಕೈ ಮತ್ತು ಪಾದಗಳು, ತಲೆ ಮತ್ತು ನಾಲಿಗೆ, ಒಸಡುಗಳು, ಸ್ಕ್ಲೆರಾ (ಕಣ್ಣಿನ ಒಳಗಿನ ಬಿಳಿ ಹೊರಪದರ) ಮತ್ತು ಜನನಾಂಗಗಳಂತಹ ಅತ್ಯಂತ ಸೂಕ್ಷ್ಮವಾದ ಪ್ರದೇಶಗಳಲ್ಲಿ 'ಕತ್ತಲೆಯನ್ನು ಸೌಂದರ್ಯವಾಗಿ ಪರಿವರ್ತಿಸುವುದು'(ಟರ್ನಿಂಗ್​ ಡಾರ್ಕ್​ನೆಸ್​ ಇನ್​​ಟೂ ಬ್ಯೂಟಿ) ಎಂಬ ವಿಷಯದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇತಿಹಾಸದಲ್ಲೇ ಅತಿ ಹೆಚ್ಚು ಹಚ್ಚೆ ಹಾಕಿಸಿಕೊಂಡಿರುವ ಮಹಿಳೆ ಎಂಬ ಖ್ಯಾತಿ ಇವರದ್ದಾಗಿದೆ.

ಬಾಲ್ಯದಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪುಸ್ತಕಗಳು ಮತ್ತು ದಾಖಲೆಗಳನ್ನು ಹೊಂದಿರುವವರನ್ನು ಮೆಚ್ಚಿಕೊಂಡು ಬೆಳೆದಿದ್ದೇನೆ. ಈಗ ಅದರಲ್ಲಿ ಸೇರಿರುವುದರಿಂದ ವಿಸ್ಮಯಗೊಂಡಿದ್ದೇನೆ. ಗೌರವದ ಜತೆಗೆ ಆಶ್ಚರ್ಯವು ಆಗಿದೆ. ನನ್ನ ಅರ್ಜಿಯನ್ನು ಸ್ವೀಕರಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಆರಂಭದಲ್ಲಿ ಸ್ವಲ್ಪ ಭಯಪಡುತ್ತಿದ್ದೆ. ಆದರೆ ನಾನೇ ದಾಖಲೆಗಾಗಿ ಅರ್ಜಿ ಸಲ್ಲಿಸುವ ಮೂಲಕ ಮಹಿಳೆಯರ ಶಕ್ತಿ ಮತ್ತು ಸಾಧ್ಯವಿರುವದನ್ನು ಪ್ರದರ್ಶಿಸಲು ಪ್ರಯತ್ನಿಸಿದೆ ಎಂದು ಎಸ್ಪೆರೆನ್ಸ್ ಫರ್ಜಿನಾ ಹೇಳಿದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net