ಪತ್ನಿ ಫೋನ್‌ ಕದ್ದಾಲಿಸಿ 15 ಕೋಟಿ ರೂ. ಗಳಿಸಿದ ಪತಿ; ಭೇಷ್ ಭೇಷ್ ಎಂದ ನೆಟ್ಟಿಗರು

mobile
Published on

ನವದೆಹಲಿ: ವರ್ಕ್‌ ಫ್ರಂ ಹೋಂನಲ್ಲಿದ್ದ ಪತ್ನಿ ನಡೆಸುತ್ತಿದ್ದ ಸಂವಹನವನ್ನು ಕದ್ದಾಲಿಕೆ ಮಾಡಿ ಪತಿ ಬರೋಬ್ಬರಿ 14 ಕೋಟಿ 96 ಲಕ್ಷ ರು. ಲಾಭಗಳಿಸಿದ್ದಾನೆ.

ಪತ್ನಿಯು ವರ್ಕ್‌ ಫ್ರಮ್‌ ಹೋಮ್‌ನಲ್ಲಿ ತನ್ನ ಮನೆಯಿಂದ ಕೆಲವೇ ಮೀಟರ್‌ ದೂರದಲ್ಲಿ ಕೆಲಸ ಮಾಡುತ್ತಿದ್ದಳು. ಆಗ ಪತಿಯು ತನ್ನ ಪತ್ನಿಯ ಮೊಬೈಲ್‌ ಸಂಭಾಷಣೆಯನ್ನು ಕದ್ದಾಲಿಕೆ ಮಾಡುವ ಮೂಲಕ ಷೇರು ವ್ಯವಹಾರ ನಡೆಸಿ ಭರ್ಜರಿ ಲಾಭ ಗಳಿಸಿದ್ದಾನೆ.

ಪತ್ನಿಯು ಕೆಲಸ ಮಾಡುತ್ತಿದ್ದ ಬಿಪಿ ಕಂಪನಿಯು ಟ್ರಾವೆಲ್‌ ಸೆಂಟರ್ಸ್‌ ಕಂಪನಿಯ ಷೇರುಗಳನ್ನು ಖರೀದಿ ಮಾಡಲಿದೆ ಎಂಬುದನ್ನು ಆಕೆಯ ಫೋನ್‌ ಕದ್ದಾಲಿಕೆಯ ಮೂಲಕ ಮಾಹಿತಿ ಸಂಗ್ರಹಿಸಿ ಟ್ರಾವೆಲ್‌ ಸೆಂಟರ್ಸ್‌ ಕಂಪನಿಯಲ್ಲಿ ತಕ್ಷಣ ಪತಿ 46 ಸಾವಿರ ಷೇರುಗಳನ್ನು ಖರೀದಿಸಿದ್ದಾನೆ.  ಷೇರು ಖರೀದಿಸಿದ 10 ದಿನಗಳಲ್ಲೇ ಮಾರುವ ಮೂಲಕ ಬರೋಬ್ಬರಿ 15 ಕೋಟಿ ರು. ಲಾಭ ಗಳಿಸಿದ್ದಾನೆ.  ಪತ್ನಿಗೆ ಈ ವಿಚಾರ ತಿಳಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆದು ಆಕೆ ಡಿವೋರ್ಸ್‌ ನೀಡಿದ್ದಾಳೆ.

ಅಮೆರಿಕದ ಸೆಕ್ಯುರಿಟಿ ಎಕ್ಸ್‌ಚೇಂಜ್‌ ಬೋರ್ಡ್‌ ಕಾನೂನು ಪ್ರಕಾರ ಫೋನ್‌ ಕದ್ದಾಲಿಕೆ ಮಾಡಿ ಷೇರುಪೇಟೆಯಲ್ಲಿ ವ್ಯವಹರಿಸುವುದು ನಿಯಮಬಾಹಿರವಾದ್ದರಿಂದ ಪತಿಯ ಮೇಲೆ ಪ್ರಕರಣ ದಾಖಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net