ಪತ್ನಿಕೊಂದು ಸೆ*ಕ್ಸ್​ ಡಾಲ್​ ಖರೀದಿಸಿದ ಗಂಡ; ಸಿಕ್ಕಿ ಬಿದ್ದಿದ್ದು ರೋಚಕ ಕಥೆ..

usman
Published on

ಅಮೆರಿಕ: ಪತಿಯೊಬ್ಬ ತನ್ನ ಕೈಯಾರೆ ಪತ್ನಿಯನ್ನು ಕೊಂದು ಆಕೆಯ ಇನ್ಶುರೆನ್ಸ್​ ಹಣದಲ್ಲಿ ಸೆಕ್ಸ್​ ಡಾಲ್​ ಖರೀದಿಸಿದ್ದಾನೆ. ಈ  ಘಟನೆ 2019ರಲ್ಲಿ ಅಮೆರಿಕದ ಕಾನ್ಸಾಸ್​ನ ಹೇಸ್​ನಲ್ಲಿ ನಡೆದಿದೆ.

ಕೋಲ್ಬಿ ಟ್ರಿಕಲ್​ ಕೊಲೆ ಮಾಡಿರುವ ಆರೋಪಿ ಪತಿ. ಕ್ರಿಸ್ಟನ್​ ಟ್ರಿಕಲ್ ಮೃತ ಮಹಿಳೆ.  ಈತ ಪತ್ನಿಯನ್ನು ಕೊಂದು ಆಕೆಯ ಇನ್ಶುರೆನ್ಸ್​ ಹಣದಲ್ಲಿ ಸೆಕ್ಸ್​ ಡಾಲ್​ ಖರೀದಿಸಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ನಡೆದಿದ್ದೇನು?:  ಕೋಲ್ಬಿ ಟ್ರಿಕಲ್​  911ಗೆ ಕರೆ ಮಾಡಿ ತನ್ನ ಪತ್ನಿ ಗುಂಡು ಹಾರಿಸಿಕೊಂಡಿದ್ದಾಳೆ ಬೇಗ ಬನ್ನಿ ಎಂದು ಹೇಳಿದ್ದ. ಪೊಲೀಸರು ತಕ್ಷಣಕ್ಕೆ ಅವರ ಮನೆ ತಲುಪಿದ್ದರು ಸಾವು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಕಂಡು ಬಂದಿದೆ.  ಈ ಪ್ರಕರಣದ ಕುರಿತಾಗಿ ಪೊಲೀಸರಿಗಿದ್ದ ಅನುಮಾನ ಹಾಗೆಯೇ ಇತ್ತು. ಕೆಲವು ತಿಂಗಳ ಬಳಿಕ ಕೋಲ್ಬಿ ಟ್ರಿಕಲ್, ತನ್ನ ಪತ್ನಿಯ 120,000 ಡಾಲರ್​ಗಿಂತ ಹೆಚ್ಚು ಮೊತ್ತದ ಎರಡು ಜೀವ ವಿಮಾ ಪಾಲಿಸಿಗಳ ಹಣ ನಗದೀಕರಿಸಿದ್ದ, ಅದಾದ ಬಳಿಕ 2,000ಡಾಲರ್​ ಖರ್ಚು ಮಾಡಿ ಅಂದರೆ ಸುಮಾರು 1.6 ಲಕ್ಷ ರೂ ಮೌಲ್ಯದ ಸೆಕ್ಸ್​ ಡಾಲ್ ಕೂಡ ಖರೀದಿ ಮಾಡಿದ್ದ.

ಕೋಲ್ಬಿ ಟ್ರಿಕಲ್ ತನ್ನ ಪತ್ನಿಯ ಸಾವಿನ ಬಳಿಕ ನೋವಿನಲ್ಲಿದ್ದಂತೆ ಕಾಣುತ್ತಿರಲಿಲ್ಲ,  ಪತ್ನಿ ಮೃತಪಟ್ಟು ಕೆಲವೇ ತಿಂಗಳುಗಳಲ್ಲಿ ಆತ ಆ ಗೊಂಬೆಯನ್ನು ಆರ್ಡರ್ ಮಾಡಿದ್ದ. ಹಣವನ್ನು ಅವರು ಕೇವಲ 8 ತಿಂಗಳಲ್ಲಿ ಖರ್ಚು ಮಾಡಿದ್ದ, ಸಾವಿರಾರು ಡಾಲರ್​ಗಳನ್ನು ಖರ್ಚು ಮಾಡಿ ವಿಡಿಯೋ ಗೇಮ್​ ಹಾಗೂ ಸಂಗೀತ ಉಪಕರಣಗಳನ್ನು ಖರೀದಿಸಿದ್ದ. ಈ ಕುರಿತಾಗಿ ತನಿಖೆ ನಡೆಸಿದ ಪೊಲೀಸರು ಕೋಲ್ಬಿ ಟ್ರಿಕಲ್ ಅವರನ್ನು ಅರೆಸ್ಟ್​ ಮಾಡಿದ್ದಾರೆ. ಆಗ ವಿಚಾರಣೆ ಮಾಡಿದಾ ಸತ್ಯ ಬಯಲಾಗಿದೆ.

ಕೆಲವು ಮಾನದಂಡಗಳನ್ನು ಬಳಸಿ ಕೊನೆಗೂ ಕೋಲ್ಬಿಯನ್ನು ತಪ್ಪಿತಸ್ಥನೆಂದು ತೀರ್ಪು ನೀಡಿದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. 2019ರಲ್ಲಿ ನಡೆದಿರುವ ಈ ಪ್ರಕರಣಕ್ಕೆ 2023ರಲ್ಲಿ ನ್ಯಾಯಾಲಕ ತೀರ್ಪು ನೀಡಿದೆ. ತಪ್ಪಿತಸ್ಥ ಪತಿಗೆ  ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net