

ವಾಷಿಂಗ್ಟನ್: ಅಬ್ಬರದ ವಾಗ್ದಾಳಿಗಳು, ಬಂಪರ್ ಭರವಸೆಗಳ ಘೋಷಣೆಗಳಿಂದ ಕಳೆದೊಂದು ವರ್ಷದಿಂದಲೇ ವಿಶ್ವಾದ್ಯಂತ ಗಮನ ಸೆಳೆದಿರುವ ಅಮೆರಿಕದ 46ನೇ ಅಧ್ಯಕ್ಷೀಯ ಚುನಾವಣೆಯ ರೋಚಕತೆ ಮತ ಎಣಿಕೆಯ ಕೊನೆಯ ಹಂತದಲ್ಲೂ ಮುಂದುವರಿದಿದೆ. ಹಾಲಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಹುರಿಯಾಳು ಹಾಗೂ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಮಧ್ಯೆ ವಿಜಯಮಾಲೆಗಾಗಿ ನಿಕಟ ಸ್ಪರ್ಧೆ ಏರ್ಪಟ್ಟಿದೆ.
ಸುಮಾರು 20 ರಾಜ್ಯಗಳಲ್ಲಿ ಫಲಿತಾಂಶ ಘೋಷಣೆ ಯಾಗಿದ್ದು, ಐದು ರಾಜ್ಯಗಳಲ್ಲಿ ಟ್ರಂಪ್ ವಿಜಯಿ ಆಗಿದ್ದಾರೆ. 17ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಡೆನ್ 15 ರಾಜ್ಯಗಳಲ್ಲಿ ಗೆಲುವು ದಾಖಲಿಸಿದ್ದು, ಏಳೆಂಟು ರಾಜ್ಯಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಪತ್ರಿಕೆ ಮುದ್ರಣಕ್ಕೆ ಹೋಗುವ ಹೊತ್ತಿಗೆ 238 ಎಲೆಕ್ಟೋರಲ್ ಕಾಲೇಜುಗಳಲ್ಲಿ ಬಿಡೆನ್ ಮತ್ತು 213ರಲ್ಲಿ ಟ್ರಂಪ್ ಮುನ್ನಡೆಯಲ್ಲಿದ್ದರು.
ಪಾರಂಪರಿಕವಾಗಿ ರಿಪಬ್ಲಿಕನ್ ಪಕ್ಷದ ಹಿಡಿತದಲ್ಲಿದ್ದ ಅರಿಜೋನಾ ರಾಜ್ಯದಲ್ಲಿ ಬಿಡೆನ್ಗೆ ಹೆಚ್ಚು ಜನಪ್ರಿಯಮತಗಳು ದಾಖಲಾಗಿವೆ. ನ್ಯೂಜೆರ್ಸಿ, ನ್ಯೂಯಾರ್ಕ್ಗಳಲ್ಲಿ ನಿಕಟ ಪೈಪೋಟಿಯ ಮಧ್ಯೆಯೂ ಬಿಡೆನ್ಗೆ ಜಯ ದಕ್ಕಿದೆ. ನ್ಯೂಯಾರ್ಕ್ನಲ್ಲಿ ಬಿಡೆನ್ಗೆ 22 ಲಕ್ಷ ಮತ ದಾಖಲಾಗಿದ್ದರೆ, ಟ್ರಂಪ್ 12 ಲಕ್ಷ ಮತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಟ್ರಂಪ್ ರನ್ವೆುೕಟ್ (ಉಪಾಧ್ಯಕ್ಷ ಅಭ್ಯರ್ಥಿ)ಹಾಲಿ ಉಪಾಧ್ಯಕ್ಷೆ ಮೈಕ್ ಮೈಕ್ ಪೆನ್ಸ್ ಮತ್ತು ಜೋ ಬಿಡೆನ್ ರನ್ವೆುೕಟ್ ಭಾರತ ಮೂಲದ ಕಮಲಾ ಹ್ಯಾರಿಸ್ ಕೂಡ ಪ್ರತಿಷ್ಠೆ ಪಣಕ್ಕಿಟ್ಟಿದ್ದಾರೆ.
ಬಿಡೆನ್ ಗೆಲುವು
ನ್ಯೂ ಹ್ಯಾಂಪ್ಷೇರ್, ಮಿನ್ನೆಸೋಟಾ, ವರ್ಜೀನಿಯಾ, ಅರಿಜೋನಾ, ನ್ಯೂಜೆರ್ಸಿ, ನ್ಯೂಯಾರ್ಕ್, ಕೊಲೊರಾಡೊ, ನ್ಯೂ ಮೆಕ್ಸಿಕೊ, ಮೆಸಾಚುಸೆಟ್ಸ್, ಕನೆಕ್ಟಿಕಟ್, ರೋಡ್ ಐಲ್ಯಾಂಡ್, ಮೇರಿಲ್ಯಾಂಡ್, ಡಿಲವೇರ್, ಇಲಿನಾಯ್್ಸ ವರ್ವೆಂಟ್.
ಮುನ್ನಡೆ ರಾಜ್ಯ
ಕ್ಯಾಲಿಫೋರ್ನಿಯಾ, ನೆವಾಡ, ವಿಸ್ಕಾನ್ಸಿನ್, ಮಿಚಿಗನ್.
ಟ್ರಂಪ್ ಗೆದ್ದ ರಾಜ್ಯ
ಫ್ಲಾರಿಡಾ, ಟೆಕ್ಸಾಸ್, ಓಹಿಯೊ, ಉತಾಹ್, ಲೋವಾ.
ಎಲ್ಲೆಲ್ಲಿ ಮುನ್ನಡೆ
ಅಲಬಾಮಾ, ಅರ್ಕಾನ್ಸಾಸ್, ಕೆಂಟುಕಿ, ಲೂಸಿಯಾನ, ಮಿಸ್ಸಿಸ್ಸಿಪ್ಪಿ, ನೆಬ್ರಸ್ಕಾ, ಉತ್ತರ ಮತ್ತು ದಕ್ಷಿಣ ಡಕೋಟಾ, ಒಕ್ಲಹಾಮ, ವ್ಯೊಮಿಂಗ್,ಟೆನ್ನೆಸ್ಸೀ, ಪಶ್ಚಿಮ ವರ್ಜೀನಿಯಾ, ದಕ್ಷಿಣ ಕರೊಲಿನಾ, ಇಂಡಿಯಾನಾ, ಜಾರ್ಜಿಯಾ, ಉತ್ತರ ಕರೊಲಿನಾ, ಪೆನ್ಸಿಲ್ವೇನಿಯಾ.
ಡೆಮಾಕ್ರಟಿಕ್ಗೆ ಖ್ಯಾತಿ ಹೆಚ್ಚು
ಪ್ಯಾಪುಲರ್ ವೋಟ್ ಪೈಕಿ ಟ್ರಂಪ್ಗೆ ಶೇ. 48.4 ಮತ್ತು ಬಿಡೆನ್ಗೆ ಶೇ.50 ಸಂದಾಯವಾಗಿದೆ ಎಂದು ಅಮೆರಿಕದ ಕೆಲ ಮಾಧ್ಯಮಗಳು ವರದಿ ಮಾಡಿವೆ.