ವರ್ಚುವಲ್​ ಕೋರ್ಟ್​ ವಿಚಾರಣೆ ಸಮಯದಲ್ಲಿ ಪ್ಯಾಂಟ್​ ಇಲ್ಲದೇ ಕುಳಿತ ಅಧಿಕಾರಿ! ಮುಂದೇನಾಯ್ತು ನೋಡಿ..Pantless

untitled-design-56-6904931634ac0
Published on

ಅಮೆರಿಕ: ಅಮೆರಿಕದ ಡೆಟ್ರಾಯಿಟ್​ ಪೊಲೀಸ್ ಅಧಿಕಾರಿಯೊಬ್ಬರು ವರ್ಚುವಲ್ ನ್ಯಾಯಾಲಯದ ವಿಚಾರಣೆ ಸಮಯದಲ್ಲಿ ಫೋನ್ ಮೂಲಕ ಹಾಜರಾಗಿದ್ದು, ಈ ವೇಳೆ ಪ್ಯಾಂಟ್​ ಧರಿಸದೆ (Pantless) ವಿಚಾರಣೆಗೆ ಕುಳಿತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ವೈರಲ್​ ಆಗುತ್ತಿರುವಂತಹ ವಿಡಿಯೋದಲ್ಲಿ ಡೆಟ್ರಾಯಿಟ್ ಪೊಲೀಸ್ ಇಲಾಖೆಯ ಅಧಿಕಾರಿ ಎಂದು ಸೂಚಿಸಲಾದ ಮ್ಯಾಥ್ಯೂ ಜಾಕ್ಸನ್ ಸೋಮವಾರ (ಅ.27) ಜೂಮ್ (ZOOM) ಆ್ಯಪ್​ ಮೂಲಕ 36 ನೇ ಜಿಲ್ಲಾ ನ್ಯಾಯಾಲಯದ ಮುಂದೆ ಸಾರ್ವಜನಿಕ ಮದ್ಯಪಾನ ಮತ್ತು ಅಜಾಗರೂಕ ಚಾಲನೆಗೆ ಸಂಬಂಧಿಸಿದ ಪ್ರಕರಣಕ್ಕೆ ಹಾಜರಾಗಿದ್ದರು.

ಈ ವಿಚಾರಣೆ ಸಮಯದಲ್ಲಿ ಜಾಕ್ಸನ್ , ಕ್ಯಾಮೆರಾ ಮುಂದೆ ತನ್ನ ಸಮವಸ್ತ್ರದ ಶರ್ಟ್, ಬ್ಯಾಡ್ಜ್, ಒಳ ಉಡುಪು ಧರಿಸಿರುವುದನ್ನು ಕಾಣಬಹುದು. ಆದರೆ, ಇವರು ಪ್ಯಾಂಟ್​ ಧರಿಸಿರಲಿಲ್ಲ. ಈ ವೇಳೆ ನ್ಯಾಯಾಧೀಶ ಸೀನ್ ಪರ್ಕಿನ್ಸ್ ಆ ವಿಚಿತ್ರ ನೋಟವನ್ನು ತಕ್ಷಣವೇ ಗಮನಿಸಿ, ಅಧಿಕಾರಿಗಳೇ ನೀವು ಪ್ಯಾಂಟ್​ ಧರಿಸಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ತಕ್ಷಣವೇ ಪೊಲೀಸ್​ ಅಧಿಕಾರಿ ಜೂಮ್​ ಮೀಟಿಂಗ್​ನಿಂದ ಹೊರ ನಡೆದಿದ್ದಾರೆ.

ಈ ದೃಶ್ಯವನ್ನು ಕಂಡಂತಹ ವಕೀಲೆಯೊಬ್ಬರು ದಿಗ್ಭ್ರಮೆಗೊಂಡ ಮುಖಭಾವದೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಮುಜುಗರದ ಪರಿಸ್ಥಿತಿಯ ಹೊರತಾಗಿಯೂ ಪ್ರಕರಣದ ತನಿಖೆಯನ್ನು ನ್ಯಾಯಾಧೀಶರು ಮುಂದುವರೆಸಿದ್ದಾರೆ. ಈ ಸಮಯದಲ್ಲಿ ಅಧಿಕಾರಿ ಜಾಕ್ಸನ್​ ಮತ್ತೆ ಜೂಮ್​ ಕರೆಯಲ್ಲಿ ಕಾಣಿಸಿಕೊಂಡಿಲ್ಲ.

ಈ ಘಟನೆಗೆ ಸಂಬಂಧಿಸಿದಂತೆ ಡೆಟ್ರಾಯಿಟ್ ಪೊಲೀಸ್ ಇಲಾಖೆಯ ಅಧಿಕಾರಿ ಬೆಟ್ಟಿಸನ್ ಪ್ರತಿಕ್ರಿಯಿಸಿದ್ದು, ತನ್ನ ಅಧಿಕಾರಿಗಳು ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗುವಾಗ ತಮ್ಮನ್ನು ತಾವು ವೃತ್ತಿಪರ ರೀತಿಯಲ್ಲಿ ಪ್ರತಿನಿಧಿಸಬೇಕೆಂದು ಬಯಸುತ್ತದೆ. ಹಾಗೆಯೇ ವಿಚಾರಣೆಯಲ್ಲಿ ಭಾಗಿಯಾದ ಅಧಿಕಾರಿಯ ಕ್ರಮಗಳು ಈ ಇಲಾಖೆಯ ವೃತ್ತಿಪರತೆಯನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net