ಪ್ರತಿ ವರ್ಷ ಸೆ.3ರಂದು ಸನಾತನ ಧರ್ಮ ದಿನಾಚರಣೆ ಮಾಡುವುದಾಗಿ ಘೋಷಣೆ ಮಾಡಿದ ಅಮೆರಿಕದ ಲೂಯಿಸ್​ವಿಲ್ಲೆ ಉಪ ಮೇಯರ್

US city declares September 3 as Sanatana Dharma Day amid row in India
Published on

ಅಮೆರಿಕ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಪುತ್ರ ಉದಯರವಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ಮಾರಣಾಂತಿಕ ಖಾಯಿಲೆಗಳಿಗೆ ಹೋಲಿಸಿ ಕಮೆಂಟ್ ಮಾಡಿದ್ದರು. ಇದಕ್ಕೆ ಎಲ್ಲೆಡೆಯಿಂದ ತೀವ್ರ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅಮರಿಕಾದ ಒಂದು ನಗರದಲ್ಲಿ ಸನಾತನ ಧರ್ಮದ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಲಾಗಿದೆ.

ಸನಾತನ ಧರ್ಮ ವಿವಾದ ಅಮೆರಿಕಾದಲ್ಲೂ ತೀವ್ರ ಸಂಚಲನ ಮೂಡಿಸಿದೆ. ಕೆಂಟುಕಿಯ ಲೂಯಿಸ್​ವಿಲ್ಲೆಯ ಮೇಯರ್ ಕ್ರೇಗ್ ಗ್ರಿನ್​ಬರ್ಗ್​ ಉಪಸ್ಥಿತಿಯಲ್ಲಿ ಉಪ ಮೇಯರ್ ಬರ್ಬರಾ ಸೆಕ್ಸ್ಟನ್ ಪ್ರತಿ ವರ್ಷ ಸೆ.3ರಂದು ಪಟ್ಟಣದಲ್ಲಿ ಸನಾತನ ಧರ್ಮ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಿದ್ದಾರೆ.

ಲೂಯಿಸ್​ವಿಲ್ಲೆಯ ಹಿಂದು ದೇವಾಲಯದಲ್ಲಿ ಮಹಾ ಕುಂಬಾಭಿಷೇಕ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಉಪಸ್ಥಿರಿದ್ದ ಹೃಷಿಕೇಶದ ಪರಮಾರ್ಥ ನಿಕೇತನದ ಅಧ್ಯಕ್ಷ ಚಿದಾನಂದ ಸರಸ್ವತಿ, ಶ್ರೀ ಶ್ರೀ ರವಿಶಂಕರ್, ಭಗವತಿ ಸರಸ್ವತಿ, ಲೆಫ್ಟಿನೆಂಟ್ ಗವರ್ನರ್ ಜಾಕ್ವೆಲಾನ್ ಕೋಲ್ಮನ್ ಮುಂತಾದ ಗಣ್ಯರ ಸಮ್ಮುಖದಲ್ಲಿ ಘೋಷಣಾ ಪತ್ರ ಓದಲಾಗಿದೆ.

ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಗಳೊಂದಿಗೆ ಹೋಲಿಸಿದ ಉದಯನಿಧಿ ಸ್ಟಾಲಿನ್ ಅವರ ಕಾಮೆಂಟ್ ತೀವ್ರ ವಿವಾದಕ್ಕೆ ಕಾರಣವಾಯಿತು. ಅವರ ಹೇಳಿಕೆಗೆ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದೆ. ಅಯೋಧ್ಯೆಯ ಸಂತ ಪರಮಹಂಸ ಆಚಾರ್ಯರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉದಯನಿಧಿಯ ಶಿರಚ್ಛೇದ ಮಾಡುವುದಾಗಿ ಘೋಷಿಸಿದರು. ಸನಾತನ ಧರ್ಮದ ಕುರಿತು ಅವರ ಹೇಳಿಕೆಗಳು ಭಾರತದಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ.

ಉದಯರವಿ ಸ್ಟಾಲಿನ್ ಹೇಳಿಕೆ ವಿರುದ್ಧ ಹಲವು ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ನಾಯಕರು ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಬೆಂಬಲ ಸೂಚಿಸಿದ್ದು, ಉತ್ತರ ಪ್ರದೇಶದ ರಾಂಪುರ ನ್ಯಾಯಾಲಯದಲ್ಲಿ ಇಬ್ಬರ ವಿರುದ್ದವೂ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net