

ಮುಂಬೈ: ನಟ ದರ್ಶನ್ ಅಭಿನಯದ ಐರಾವತ ಸಿನಿಮಾ ನಟಿ ಊರ್ವಶಿ ರೌಟೇಲಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಇತ್ತೀಚೆಗೆ ಎರಡು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ, ಇದನ್ನು ನೋಡಿ ಅಭಿಮಾನಿಗಳು ಸಹ ಸಾಕಷ್ಟು ಗೊಂದಲಕ್ಕೊಳಗಾಗಿದ್ದಾರೆ.
ಬ್ಯುಸಿ ಶೆಡ್ಯೂಲ್‌ನಿಂದಾಗಿ ನಟಿಗೆ ತನ್ನನ್ನು ತಾನು ನೋಡಿಕೊಳ್ಳುವ ಅವಕಾಶ ಸಿಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ಸ್ವತಃ ವಿಶ್ರಾಂತಿ ಪಡೆಯಲು ಪ್ರೆಸ್ಥೆರಪಿ ಸೆಷನ್ ತೆಗೆದುಕೊಂಡರು. ಊರ್ವಶಿ ಹಂಚಿಕೊಂಡ ಫೋಟೋದಲ್ಲಿ, ಅವಳು ಮಲಗಿದ್ದಾಳೆ ಮತ್ತು ಅವಳ ದೇಹವನ್ನು ಯಂತ್ರಕ್ಕೆ ಜೋಡಿಸಲಾಗಿದೆ. ಊರ್ವಶಿ ಅವರು ಪ್ರೆಸ್ಸೋಥೆರಪಿ (pressotherapy) ತೆಗೆದುಕೊಳ್ಳುತ್ತಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಅವರು ಪ್ರೆಸ್ಸೋಥೆರಪಿ ಚಿಕಿತ್ಸೆಗೆ ಇದು ಸಮಯ ಎಂದು ಬರೆದಿದ್ದಾರೆ.
ಪ್ರೆಸ್ಸೋಥೆರಪಿ ಎಂದರೇನು?: ಈ ಥೆರಪಿಯ ಸಹಾಯದಿಂದ ದೇಹದ ಕೆಲವು ಭಾಗಗಳನ್ನು ಏರ್ ಪ್ರೆಶರ್ ಕಂಪ್ರೆಷನ್ ಮತ್ತು ಡಿಕಂಪ್ರೆಶನ್ ಮೂಲಕ ಮಸಾಜ್ ಮಾಡಲಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಊರ್ವಶಿ ರೌಟೇಲಾ ಇದನ್ನು ತನ್ನ ಪೂರ್ತಿ ದೇಹಕ್ಕೆ ಮಾಡಿಸಿದ್ದಾರೆ. ಈ ಚಿಕಿತ್ಸೆಯು ತೂಕ ನಷ್ಟ, ಸ್ನಾಯು ಸೆಳೆತ, ದೇಹ ಮಸಾಜ್ ಮಾಡಲು ಸಹಾಯ ಮಾಡುತ್ತದೆ. ಪ್ರೆಸ್ಸೊಥೆರಪಿಯು ನೀರಿನ ಧಾರಣವನ್ನು ದೇಹಕ್ಕೆ ಅಗತ್ಯವಾಗಿ ಎಷ್ಟು ಬೇಕು ಅಷ್ಟೆ ಉಳಿಸಲು ಸಹಾಯ ಮಾಡಲುತ್ತದೆ ಈ ಚಿಕಿತ್ಸೆ. ಸೆಲೆಬ್ರಿಟಿಗಳು ಸಾಮಾನ್ಯವಾಗಿ ದೇಹವನ್ನು ಯಾವಾಗಲು ಉತ್ಸಾಹಕತೆಯಿಂದ ಕೂಡಿರಲು ಈ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಾರೆ.
ಈ ಚಿಕಿತ್ಸೆಯ ಪ್ರತಿ ಸೆಷನ್‌ಗೆ ಪಡೆಯುವ ಬೆಲೆಗೆ ನೀವು ಐಫೋನ್ ಖರೀದಿಸಬಹುದು. ಹೌದು, ಈ ಥೆರಪಿಯ ಒಂದು ಸೆಷನ್‌ಗೆ ಸುಮಾರು 60 ನಿಮಿಷಗಳ ಕಾಲ 80 ಸಾವಿರ ರೂ.ಗಿಂತ ಹೆಚ್ಚು ವೆಚ್ಚವಾಗುತ್ತದೆ, ಅಂದರೆ ಇದಕ್ಕಾಗಿ ನೀವು ದೊಡ್ಡ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈ ಚಿಕಿತ್ಸೆಯನ್ನು ಪ್ರತಿ ತಿಂಗಳು ಕನಿಷ್ಠ 2-3 ಬಾರಿ ತೆಗೆದುಕೊಳ್ಳ ಬೇಕಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಈ ಚಿಕಿತ್ಸೆಯು ಒತ್ತಡ ಮುಕ್ತವಾಗಿ ಉಳಿಯಲು, ಹೊಳಪು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ದೇಹವನ್ನು ನಿರ್ವಿಷಗೊಳಿಸಲು ಈ ಥೆರಪಿಯನ್ನು ತೆಗೆದುಕೊಳ್ಳುವ ಆಲೋಚನೆಯಲ್ಲಿದ್ದರೆ, ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ.