ಕಳೆದು ಹೋದ 24 ಕ್ಯಾರೆಟ್​​ ಚಿನ್ನದ ಐ ಫೋನ್​​ ಫೋನ್ ತಂದುಕೊಟ್ಟವರಿಗೆ ಬಹುಮಾನ ಘೋಷಿಸಿದ ನಟಿ ಊರ್ವಶಿ

urvashi
Published on

ಮುಂಬೈ: ಭಾರತ ಮತ್ತು ಪಾಕ್​​​ ನಡುವಿನ ಪಂದ್ಯ ವೀಕ್ಷಿಸಲು ಬಾಲಿವುಡ್​​ ನಟಿ ಊರ್ವಶಿ ರೌಟೇಲಾ ಅವರು ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮನಿಸಿದ್ದರು. ಈ ವೇಳೆ ನಟಿ ದುಬಾರಿ ಬೆಲೆ ಬಾಳುವ ಮೊಬೈಲ್​​ ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಈ ಮೊಬೈಲ್​​​ ವಾಪಸ್​ ತಂದು ಕೊಟ್ಟರೆ ಭಾರಿ ಬಹುಮಾನ ಕೊಡುವುದಾಗಿ ನಟಿ ಹೇಳಿದ್ದಾರೆ.

ಅಕ್ಟೋಬರ್ 14ರಂದು ನಡೆದ ಭಾರತ- ಪಾಕಿಸ್ತಾನ ಕ್ರಿಕೆಟ್ (Cricket) ಪಂದ್ಯಾವಳಿ ನೋಡಲು ಹಲವು ಜನಪ್ರಿಯ ಸೆಲೆಬ್ರಿಟಿಗಳು ಆಗಮಿಸಿದ್ದರು. ಈ ವೇಳೆ 24 ಕ್ಯಾರೆಟ್​​ ಚಿನ್ನದ ಐ ಫೋನ್ ಕಳೆದು ಹೋಗಿದೆ ಎಂದು  ಐರಾವತ ನಟಿ ಸೋಶಿಯಲ್​​ ಮೀಡಿಯಾ ಮೂಲಕವಾಗಿ ಅಳಲು ತೋಡಿಕೊಂಡಿದ್ದರು.

ನನ್ನ 24 ಕ್ಯಾರೆಟ್​​ ಚಿನ್ನದ ಐ ಫೋನ್​​ ಕಳೆದು ಹೋಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​​ ಸ್ಟೇಡಿಯಂನಲ್ಲಿ ಕಳೆದು ಹೋಗಿದೆ. ಯಾರಿಗಾದರೂ ಸಿಕ್ಕಿದ್ದರೆ, ದಯವಿಟ್ಟು ತಂದು ಕೊಡಿ, ಮೊಬೈಲ್​ ನಿಮಗೆ ಸಿಕ್ಕಿದ್ದರೆ ನನ್ನ ಸಂಪರ್ಕಿಸಿ ಎಂದು ಮನವಿ ಮಾಡಿ ಟ್ವೀಟ್​​ ಮಾಡಿದ್ದರು. ಊರ್ವಶಿ ರೌಟೆಲ್ಲಾರ ಈ ಪೋಸ್ಟ್ ಅನ್ನು ಹಲವರು ಟ್ರೋಲ್ ಮಾಡಿದ್ದಾರೆ. ಆದರೆ ನಟಿ ಮಾತ್ರ ಈ ಮೊಬೈಲ್​​ ವಾಪಸ್​ ಪಡೆಯುವ ಉದ್ದೇಶದಿಂದ ಮಾಸ್ಟರ್​​ ಪ್ಲ್ಯಾನ್​​ ಮಾಡಿದ್ದಾರೆ.

ಮೊಬೈಲ್ ತಂದುಕೊಟ್ಟವರಿಗೆ ಬಹುಮಾನ ನೀಡುವುದಾಗಿ ಹೇಳಿರುವ ಊರ್ವಶಿ, ಆ ಬಹುಮಾನ ಯಾವುದು ಎನ್ನುವುದನ್ನು ತಿಳಿಸಿಲ್ಲ. ಮೊಬೈಲ್‍ ಕಳೆದುಕೊಂಡಿರುವ ಕುರಿತು ಪೊಲೀಸರು ಕೂಡ ಕಾಳಜಿ ವಹಿಸಿದ್ದು, ಊರ್ವಶಿ ಮೊಬೈಲ್ ಬೇಗ ಸಿಗಲಿ ಎಂದು ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net