

Urvashi Rautel:ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸಾಮಾನ್ಯವಾಗಿ ಆಗ್ಗಾಗೆ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಡಾಕು ಮಹಾರಾಜ್ ಚಿತ್ರದ ಮೂಲಕ ಪರದೆ ಮೇಲೆ ಕಾಣಿಸಿಕೊಂಡಿದ್ದ ನಟಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಹೌದು, ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ನಟನೆ ಡಾಕು ಮಹಾರಾಜ್ ಚಿತ್ರದ ನಟಿಸಿದ ಊರ್ವಶಿ, ಒಂದು ನಿಮಿಷಕ್ಕೆ ಒಂದು ಕೋಟಿಯಂತೆ ಮೂರು ನಿಮಿಷ ಪಾತ್ರಕ್ಕಾಗಿ ನಿರ್ಮಾಪಕರಿಂದ ಬರೊಬ್ಬರಿ 3 ಕೋಟಿ ರೂ. ಪಡೆದಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿಗೆ ಈಕೆ ನಟಿಸಿರುವ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋತಿದ್ದರು ಊರ್ವಶಿ ಸಂಭಾವನೆ ಮಾತ್ರ ಕಡಿಮೆಯಾಗಿಲ್ಲ. ಊರ್ವಶಿ ರೌಟೇಲಾ ತಮ್ಮ ಅಭಿನಯಕ್ಕಾಗಿ ನಿಮಿಷಕ್ಕೆ 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ವರದಿಗಳು ಹೇಳುತ್ತಿವೆ.
ಇನ್ನು ನಟಿಯ ಅಂದಾಜು ನಿವ್ವಳ ಮೌಲ್ಯ ಸುಮಾರು 236 ಕೋಟಿ ರೂ.ಗಳಾಗಿದ್ದು, ಅವರು ತಮ್ಮ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ 73 ಮಿಲಿಯನ್ ಫ್ಯಾನ್ಸ್ ಫಾಲೋ ಮಾಡುತ್ತಿದ್ದಾರೆ.
ಇದೇ ಜ.14ರ ಸಂಕ್ರಾಂತಿಯಂದು ಬಿಡುಗಡೆಯಾಗಿರುವ ಡಾಕು ಮಹಾರಾಜ್ ಸಿನಿಮಾ ವಿಚಾರಕ್ಕೆ ಬರುವುದಾದರೆ, ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ನಾಯಕ ಪಾತ್ರ ಮಾಡಿದ್ದು, ಬಾಬಿ ಡಿಯೋಲ್, ಪ್ರಜ್ಞಾ ಜೈಸ್ವಾಲ್, ಶ್ರದ್ಧಾ ಶ್ರೀನಾಥ್, ರಿಷಿ, ಚಾಂದಿನಿ ಚೌಧರಿ, ಊರ್ವಶಿ ರೌಟೇಲಾ ಮತ್ತು ಪ್ರದೀಪ್ ರಾವತ್ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಅದ್ಭುತ ತಾರಾಗಣವೂ ಇದೆ.(ಏಜೆನ್ಸೀಸ್)