

Urvashi Dholakia: ಏಕ್ತಾ ಕಪೂರ್, ಚಂದ್ರಕಾಂತ, ಪುಷ್ಪಾ ಇಂಪಾಸಿಬಲ್ ಧಾರವಾಹಿಗಳಿಗೆ ಹೆಸರುವಾಸಿಯಾದ ನಟಿ ಊರ್ವಶಿ ಧೋಲಾಕಿಯಾ ಅವರಿಗೆ ಬೀದಿ ನಾಯಿಗಳ ಬಗ್ಗೆ ಇರುವ ಕಾಳಜಿಯ ವಿರುದ್ಧ ಅನುಮಾನ ವ್ಯಕ್ತಪಡಿಸಿ, ಟ್ರೋಲ್ ಮಾಡಿದವರಿಗೆ ಪೋಸ್ಟ್ ಮಾಡುವ ಮೂಲಕ ಉತ್ತರ ನೀಡಿದ್ದಾರೆ.
ನಟಿ ಊರ್ವಶಿ ತನ್ನ ಸಾಕು ನಾಯಿಗಳು ಮತ್ತು ಬೆಕ್ಕುಗಳೊಂದಿಗೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಸಾಕುನಾಯಿಗಳ ಬಗ್ಗೆ ಸ್ವಲ್ಪ ಮಾನವೀಯತೆ ತೋರಿಸಿ ಎಂದು ಬರೆದಿದ್ದಾರೆ. ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ಡಿಪೋಗಳು ಮತ್ತು ರೈಲ್ವೆ ನಿಲ್ದಾಣಗಳ ಸುತ್ತ ಇರುವಂತಹ ಬೀದಿ ನಾಯಿಗಳನ್ನು ತೆಗೆದುಹಾಕುವ ಬಗ್ಗೆ ಸುಪ್ರೀಂ ನೀಡಿದ ತೀರ್ಪೀನ ನಂತರ ಈ ಪೋಸ್ಟ್ನ್ನು ಹಂಚಿಕೊಂಡಿದ್ದಾರೆ.
ಬೀದಿ ನಾಯಿಗಳ ಕುರಿತು ಸುಪ್ರೀಂ ಕೋರ್ಟ್ನ ಹೊಸ ಆದೇಶದ ಬಗ್ಗೆ ಹಾಕಿದ ಪೋಸ್ಟ್ ನನ್ನ ಪ್ರಾಮಾಣಿಕತೆಯನ್ನು ದೃಢೀಕರಿಸುತ್ತದೆ . ನನ್ನನ್ನು ಪ್ರಶ್ನಿಸುವವರಿಗೆ ಈ ರೀತಿಯಾಗಿ ಉತ್ತರಿಸುತ್ತೇನೆ. ಇಂತಹ ವಿಚಾರಗಳನ್ನು ನಾನು ಎಂದಿಗೂ ಪೋಸ್ಟ್ ಮಾಡುವ ಪ್ರವೃತ್ತಿಯನ್ನು ಹೊಂದಿಲ್ಲ. ಹಾಗೆಯೇ ಪೋಸ್ಟ್ಗಾಗಿ ನಾನು ನನ್ನ ಮಾತುಗಳನ್ನು ಅಥವಾ ನನ್ನ ಆಲೋಚನೆಗಳನ್ನು ಎಂದಿಗೂ ತಿಳಿಸಲು ಪ್ರಯತ್ನಿಸುವುದಿಲ್ಲ ಎಂದು ಹೇಳಿದರು.
ನನ್ನ ಕುಟುಂಬವು ಯಾವಾಗಲೂ ಭಾರತದ ಕಡೆಗೆ ಬೆಂಬಲ ಮತ್ತು ಪ್ರೀತಿಯನ್ನು ಹೊಂದಿದೆ. ಅದು ನಾಯಿಗಳಾಗಲೀ ಅಥವಾ ಬೆಕ್ಕುಗಳಾಗಲಿ ನಾವು ಅದರ ಬಗ್ಗೆ ಸಂಪೂರ್ಣವಾಗಿ ಹೆಮ್ಮೆಪಡುತ್ತೇವೆ! ಹಾಗೆಯೇ ಬೀದಿ ನಾಯಿಗಳನ್ನು ದತ್ತು ಪಡೆಯಲು ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಅಗತ್ಯವಿರುವಾಗ ನಾನು ಧ್ವನಿ ಎತ್ತುತ್ತೇನೆ. ಇಂದು ನಾನು ಮಾಡುತ್ತಿರುವುದು ಅದನ್ನೇ. ನನ್ನ ಆಲೋಚನೆಗಳನ್ನು ಪ್ರಶ್ನಿಸುವ ಮೊದಲು ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಿ. ಮೂಖ ಜೀವಿಗಳಿಗೆ ನೀವು ಏನು ಮಾಡಿದ್ದೀರಿ ಎಂಬುದನ್ನು ನೀವೇ ಕೇಳಿಕೊಳ್ಳಿ. ಇಂತಹ ನಕರತಾತ್ಮಕ ಹೇಳಿಕೆಗಳನ್ನು ನೀಡಿ ಸಮಯ ವ್ಯರ್ಥ ಮಾಡಿಕೊಳ್ಳುವ ಬದಲಿಗೆ ಮೂಖ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಒಳ್ಳೆಯ ಕೆಲಸಗಳನ್ನು ಮಾಡಿ. ಸ್ವಲ್ಪ ಮಾನವೀಯತೆ ತೋರಿಸಿ ಎಂದು ಪೋಸ್ಟ್ ಮಾಡಿದ್ದಾರೆ.
ಬೀದಿನಾಯಿಗಳ ತೊಡೆದು ಹಾಕುವ ಬಗ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ (ನ. 7) ಬೀದಿ ನಾಯಿಗಳನ್ನು ತೊಡೆದುಹಾಕುವುದಕ್ಕಿಂತ ಮಾನವೀಯತೆಗೆ ಒತ್ತು ನೀಡಬೇಕೆಂದು ತಿಳಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠದಲ್ಲಿ ಶಾಲೆಗಳು, ಆಸ್ಪತ್ರೆಗಳು, ಬಸ್ ಸ್ಟ್ಯಾಂಡ್‌ಗಳು, ರೈಲು ನಿಲ್ದಾಣಗಳು ಮುಂತಾದ ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವಿಗೊಳಿಸಬೇಕು ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ನೀಡಿದೆ.
ಈ ನಾಯಿಗಳನ್ನು ಸ್ಥಳೀಯ ಮಹಾನಗರ ಸಂಸ್ಥೆಗಳು ಸಂಗ್ರಹಿಸಿಕೊಂಡು ಅವುಗಳನ್ನು ಜಂತು ಜನ್ಮ ನಿಯಂತ್ರಣ (ಎಬಿಸಿ) ನಿಯಮಗಳ ಅನುಸಾರ, ಸ್ಟೆರಿಲೈಸೇಶನ್ ಮತ್ತು ಲಸಿಕೆ ನೀಡಿದ ನಂತರ, ನಿರ್ದಿಷ್ಟ ಆಶ್ರಯಗಳಿಗೆ ಕಳುಹಿಸಬೇಕು. ಆದರೆ, ಈ ನಾಯಿಗಳನ್ನು ಮೂಲ ಸ್ಥಳಕ್ಕೆ ಮರಳಿಸಬಾರದು ಎಂದು ಸ್ಪಷ್ಟವಾಗಿ ಸುಪ್ರೀಂ ಉಲ್ಲೇಖಿಸಿದೆ. (ಏಜೆನ್ಸೀಸ್)