ಕಲೆಯಿಂದ ಮನಸ್ಸು ಕಟ್ಟುವ ಕೆಲಸನಾಟ್ಯಾರಾಧನಾ ಕಲಾ ಕೇಂದ್ರ ಸರಣಿ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಅಗರಿ ರಾಘವೇಂದ್ರ ರಾವ್ ಅಭಿಮತ

mng--25 April Natyaradana
Published on

ಮಂಗಳೂರು: ಬಾಲ್ಯದಿಂದಲೇ ಭಾರತೀಯ ನೃತ್ಯ, ಸಂಗೀತ ಮುಂತಾದ ಕಲೆಗಳಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಂಡರೆ ಭವಿಷ್ಯದಲ್ಲಿ ದೇಶದ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವುದರಲ್ಲಿ ಅನುಮಾನವಿಲ್ಲ. ಸಾಂಸ್ಕೃತಿಕ ಕಲೆಗಳು ಮನಸ್ಸು ಕಟ್ಟುವ ಕೆಲಸ ಮಾಡುತ್ತದೆ ಎಂದು ಅಗರಿ ಎಂಟರ್‌ಪ್ರೈಸಸ್ ಸಂಸ್ಥೆಯ ಮಾಲೀಕ ಅಗರಿ ರಾಘವೇಂದ್ರ ರಾವ್ ಅವರು ಹೇಳಿದರು.


ಪುರಭವನದಲ್ಲಿ ನಡೆದ ಮಂಗಳೂರಿನ ಉರ್ವ ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವ ಸಮಾರಂಭದ ನೃತ್ಯಾಮೃತ ಸರಣಿ ನೃತ್ಯ ಕಾರ್ಯಕ್ರಮ -3 ರ ಉದ್ಘಾಟಿಸಿ ಮಾತನಾಡಿದರು.


ಅಶೋಕನಗರ ಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ಅಧ್ಯಕ್ಷ ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪರಿಶ್ರಮವಿಲ್ಲದೆ ಯಶಸ್ಸಿಲ್ಲ. ಈ ನಿಟ್ಟಿನಲ್ಲಿ ಕಳೆದ 30 ವರುಷಗಳಿಂತ ನಿರಂತರವಾಗಿ ಭರತನಾಟ್ಯ ಕಲಾ ಪ್ರಸರಣ ಕಾರ್ಯದಲ್ಲಿ ತೊಡಗಿರುವ ಯಶಸ್ವಿ ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಹಿರಿಯ ನೃತ್ಯ ಗುರು ನಾಟ್ಯಾಲಯ ಉರ್ವದ ನಿರ್ದೇಶಕಿ ವಿದುಷಿ ಕಮಲಾ ಭಟ್, ನಾಟ್ಯ ನಿಕೇತನ ಕೊಲ್ಯ ಕೋಟೆಕಾರ್ ನ ನಿರ್ದೇಶಕಿ ವಿದುಷಿ ರಾಜಶ್ರೀ ಉಳ್ಳಾಲ್ , ಕರ್ನಾಟಕ ಬ್ಯಾಂಕ್ ಉದ್ಯೋಗಿ ವರಲಕ್ಷ್ಮೀ ಸರ್ವೇಶ ರಾವ್ , ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ವಿದುಷಿ ಸಿಂಧೂರ ಎಲ್.ಎಚ್., ತ್ರಿಂಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಗಣೇಶ್ ಅಮೀನ್ ಸಂಕಮಾರ್ ಮತ್ತು ಟ್ರಸ್ಟಿ ಬಿ.ರತ್ನಾಕರ ರಾವ್ ಉಪಸ್ಥಿತರಿದ್ದರು.


ಉದ್ಘಾಟನೆಯ ಬಳಿಕ ನಡೆದ ಶ್ರೀ ರಾಮಾಭಿವಂದನ ನೃತ್ಯ ಕಾರ್ಯಕ್ರಮ ಹಾಗೂ ಮಾಯಾ ವಿಲಾಸ ನೃತ್ಯ ರೂಪಕ ಸಂಸ್ಥೆಯ ನಿರ್ದೇಶಕಿ ಗುರು ಸುಮಂಗಲಾ ರತ್ನಾಕರ್ ರಾವ್ ಅವರ ಪರಿಕಲ್ಪನೆ, ರಚನೆ ಮತ್ತು ನಿರ್ದೇನದಲ್ಲಿ ನಾಟ್ಯಾರಾಧನಾದ ವಿದ್ಯಾರ್ಥಿಗಳಿಂದ ಯಶಸ್ವಿಯಾಗಿ ಮೂಡಿಬಂತು.
ಭಾರ್ಗವಿ ಮಯ್ಯ ಪ್ರಾರ್ಥಿಸಿದರು, ಸುಮಂಗಲಾ ರತ್ನಾಕರ್ ರಾವ್ ಸ್ವಾಗತಿಸಿದರು. ಶೈಲಜ ಜಗತಾಪ್ ವಂದಿಸಿದರು. ಮಂಜುಳಾ ಪ್ರವೀಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net