

ಕೋಲಾರ: ನಾಲ್ವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಟನೆಗೆ ಸರ್ಕಾರವು ವಿಷಾದ ವ್ಯಕ್ತಪಡಿಸುತ್ತದೆ. ಹೆಚ್ಚು ಪ್ರವಾಸಿಗರು ಬರುವ ಸ್ಥಳದಲ್ಲಿ ಮುಂಜಾಗ್ರತ ಕ್ರಮ ಕೈಗೊಳ್ಳಲು ಸದಸ್ಯರು ನೀಡಿರುವ ಸಲಹೆಗಳನ್ನು ಸ್ವೀಕರಿಸಿ ಕ್ರಮವಹಿಸಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶುಕ್ರವಾರ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಿಎಂ ಆಗಲಿ, ಸರ್ಕಾರವಾಗಲಿ ಜೀವ ಹಾನಿ ಆದಾಗ ಯಾರು ಜವಾಬ್ದಾರರು ಅಲ್ಲ ಎಂದರೆ ಸಮರ್ಥಿಸಿಕೊಳ್ಳಲು ಹೇಗೆ ಸಾಧ್ಯ. ಟನೆಗೆ ಮೇಲುಸ್ತುವಾರಿ ವಹಿಸಿದ್ದ 7 ಮಂದಿ ಶಿಕ್ಷಕರ ಬೇಜವಾಬ್ದಾರಿತನ ಮೇಲ್ನೋಟಕ್ಕೆ ಕಂಡು ಬಂದಿದೆ. ಮಕ್ಕಳು ನೀರಿಗೆ ಇಳಿಯುವ ಮುನ್ನ ಸಲಹೆ ಸೂಚನೆ ನೀಡಬೇಕಿತ್ತು. ಸಂಭವಿಸಿರುವ ಟನೆಗೆ ಯಾರು ಜವಾಬ್ದಾರರಲ್ಲ ಎಂದು ಕೈ ಚೆಲ್ಲುವುದನ್ನು ಸರ್ಕಾರ ಒಪು$್ಪವುದಿಲ್ಲ. ನಿಜವಾಗಿ ಏನಾಯಿತು ಎಂಬುದರ ಬಗ್ಗೆ ತನಿಖೆ ಚಾಲ್ತಿಯಲ್ಲಿದ್ದು ವರದಿ ಆಧರಿಸಿ ಶಿಸ್ತು ಕ್ರಮ ಜರುಗಿಸಲಾಗುವುದು. ಮುರುಡೇಶ್ವರಕ್ಕೆ ಶಾಲಾ ಕಾಲೇಜುಗಳಿಂದ ಹೆಚ್ಚು ಮಂದಿ ಪ್ರವಾಸಕ್ಕೆ ಬರುತ್ತಾರೆ. ಸದಸ್ಯರು ನೀಡಿರುವ ಸಲಹೆಗಳನ್ನು ಸ್ವೀಕರಿಸಿ ಉತ್ತರ ಒದಗಿಸುತ್ತೇವೆ ಎಂದು ತಿಳಿದರು.
ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಒಂದೇಶ ದೇಶ, ಹಲವು ಜಗತ್ತು, ಬನ್ನಿ ನಿಮ್ಮ ಮಕ್ಕಳನ್ನು ನೀರಿಗೆ ಹಾಕಿ ಎಂಬತಾಗಿದೆ. ಮುರುಡೇಶ್ವರ ಪ್ರವಾಸಿ ಸ್ಥಳದಲ್ಲಿ ಪದೇಪದೆ ಪ್ರವಾಸಿಗರು ಮೃತಪಡುತ್ತಿದ್ದಾರೆ, ಆದರೂ ಸರ್ಕಾರ ಯಾಕೆ ಎಚ್ಚೆತ್ತುಕೊಂಡಿಲ್ಲ ಎಂದು ಪ್ರಶ್ನಿಸಿದರು.
ಮುಳಬಾಗಿಲು ತಾಲೂಕಿನ ಕೊತ್ತೂರು ಮೊರಾರ್ಜಿ ದೇಸಾಯಿ ಶಾಲಾ ಮಕ್ಕಳು ಪ್ರವಾಸ ತೆರಳಿದ್ದರು, 7 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅದರಲ್ಲಿ 3 ಮಂದಿ ಅದೃಷ್ಟದಿಂದ ಮೂರು ಮಂದಿ ಮಕ್ಕಳು ಗಾಯಗೊಂಡು ಜೀವಪಾಯದಿಂದ ಪಾರಾಗಿ ಬಂದಿದ್ದಾರೆ. ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ಅವರಿಗೆ 5 ಲಕ್ಷ ರೂ. ಪರಿಹಾರ ಕೊಟ್ಟು ಮೃತದೇಹ ತೆಗೆದುಕೊಂಡು ಹೋಗಿ ಎಂದು ಸರ್ಕಾರ ಹೇಳಿದ್ದು ನಮ್ಮ ಪದ್ಧತಿ ಎಂದು ವಿಷಾದ ವ್ಯಕ್ತಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿದಾಗ ಮಂಕಾಳ ವೈದ್ಯರು, ಡಿಸಿ, ಎಸ್ಪಿ, ಎಸಿ ಇದ್ದರು. ಸಂಜೆ 5 ಗಂಟೆ ಸಮಯದಲ್ಲಿ ನೀರಿಗೆ ಇಳಿಯಲು ಯಾವುದೇ ರೀತಿ ಭದ್ರತೆಯಿರಲಿಲ್ಲ. ಅಲ್ಲಿನ ವ್ಯವಸ್ಥೆ ನೋಡಿದಾಗ ಲ್ೈಗಾರ್ಡ್, ಸೆಕ್ಯೂರಿಟಿ ಇರಲಿಲ್ಲ. ಆದರೆ ಶಿಕ್ಷಕರನ್ನು ಹೊಣೆ ಮಾಡಿ ಬಂಧಿಸಿದ್ದಾರೆ ಯಾಕೆ?, ಮೊದಲು ಯಾವುದೇ ರೀತಿ ಅನಾಹುತ ಸಂಭವಿಸದಂತೆ ಎಚ್ಚರವಹಿಸಲಿ ಎಂದು ಒತ್ತಾಯಿಸಿದರು.