

Urfi Javed will never marry a Muslim man : ವಿಚಿತ್ರ ಫ್ಯಾಷನ್‌ಗೆ ಸುದ್ದಿಯಾಗುತ್ತಲೇ ಇರುವ ಉರ್ಫಿ ಜಾವೇದ್, ಇಸ್ಲಾಂನಲ್ಲಿ ಹುಟ್ಟಿರುವ ಉರ್ಫಿ ಜಾವೇದ್, ಶಾಕಿಂಗ್ ಹೇಳಿಕೆಯೊಂದನ್ನು ಕೊಟ್ಟಿರುವ ಬಗ್ಗೆ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ.
ನಟಿ, ತಮ್ಮ ವೈಯಕ್ತಿಕ ನಂಬಿಕೆಗಳ ಬಗ್ಗೆ ಮಾತನಾಡುತ್ತಾ, ತಾನು ಇಸ್ಲಾಂ ಧರ್ಮವನ್ನು ಅನುಸರಿಸುವುದಿಲ್ಲ. ನನ್ನ ತಂದೆಯನ್ನು ನೋಡಿಯೇ, ಆತ ನಮಗೆ ಮತ್ತು ನನ್ನ ತಾಯಿಗೆ ಕೊಟ್ಟಿರುವ ಹಿಂಸೆಯನ್ನು ಕಂಡವಳು ನಾನು. ಅವರು ನನ್ನ ತಾಯಿ ಮತ್ತು ನಮಗೆ ಸಿಕ್ಕಾಪಟ್ಟೆ ಹೊಡೆಯುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ನಾವೆಲ್ಲಾ ಹೆಣ್ಣು ಮಕ್ಕಳು ಎನ್ನುವುದು. ನಾನು ಮೂರನೆಯವಳು. ನಾನು ಕೂಡ ಹೆಣ್ಣಾಗಿ ಹುಟ್ಟಿದ ಮೇಲೆ ಅವರ ಕೋಪ ಇನ್ನಷ್ಟು ಹೆಚ್ಚಾಯಿತು. ನಾಲ್ಕನೆಯ ಬಾರಿಗೆ ಅಮ್ಮ ಗರ್ಭಿಣಿಯಾದರು. ಆಗಲೂ ಹೆಣ್ಣು ಹುಟ್ಟಿದರೆ ಡಿವೋರ್ಸ್ ನಡುನೀರಿನಲ್ಲಿ ಬಿಟ್ಟು ಬೇರೆ ಮದುವೆಯಾದರು ಎಂದಿದ್ದಾರೆ.
ನಾನು ಮುಸ್ಲಿಂ ಹುಡುಗಿ. ನನಗೆ ಬರುವ ಹೆಚ್ಚಿನ ದ್ವೇಷದ ಕಾಮೆಂಟ್‌ಗಳು.. ನಾನು ಇಸ್ಲಾಂನ ಮತ್ತಕ್ಕೆ ಕಳಂಕ ತರುತ್ತಿದ್ದೇನೆ ಎಂದು ಅವರು ಹೇಳುತ್ತಾರೆ. ಮುಸ್ಲಿಂ ಪುರುಷರು ತಮ್ಮ ಮಹಿಳೆಯರು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸಬೇಕೆಂದು ಬಯಸುತ್ತಾರೆ ಎಂಬ ಕಾರಣಕ್ಕಾಗಿ ಅವರು ನನ್ನನ್ನು ದ್ವೇಷಿಸುತ್ತಾರೆ. ಸಮುದಾಯದ ಎಲ್ಲಾ ಮಹಿಳೆಯರನ್ನು ನಿಯಂತ್ರಿಸಲು ಅವರು ಬಯಸುತ್ತಾರೆ. ಈ ಕಾರಣದಿಂದಾಗಿ ನಾನು ಇಸ್ಲಾಂ ಅನ್ನು ನಂಬುವುದಿಲ್ಲ ಎಂದಿದ್ದಾರೆ.
ಬಹುತೇಕ ಮುಸ್ಲಿಮ್ ಪುರುಷರಿಗೆ ಮಹಿಳೆಯರು ಅವರು ಹೇಳಿದಂತೆಯೇ ಇರಬೇಕು. ಅವರಿಗೆ ಸಂಬಂಧಗಳ ಮೇಲೆ ಹಿಂದೂಗಳಲ್ಲಿ ಇರುವಷ್ಟು ಪ್ರೀತಿ ಇಲ್ಲ. ಆದ್ದರಿಂದ ಮುಸ್ಲಿಂ ಹುಡುಗನನ್ನು ಮದುವೆಯಾಗಲಾರೆ. ಅವರು ಹೇಳಿದಂತೆ ನನ್ನಿಂದ ಬಟ್ಟೆ ಧರಿಸುವುದು ಸಾಧ್ಯವಿಲ್ಲ. ಎಲ್ಲ ಮಹಿಳೆಯರನ್ನು ಅವರು ಕಂಟ್ರೋಲ್ ಮಾಡಲು ಬಯಸುತ್ತಾರೆ. ನನಗೆ ಅದೆಲ್ಲಾ ಸಾಧ್ಯವಿಲ್ಲ ಎಂದಿರುವ ಉರ್ಫಿ.
ನಾನು ಭಗವಗ್ದೀತೆಯನ್ನು ಓದುತ್ತಿದ್ದೇನೆ. ಅದರಿಂದ ನನಗೆ ಜೀವನದ ಅರಿವು ಆಗಿದೆ. ಈ ಪುಸ್ತಕವನ್ನು ಓದಿದಾಗ ಸಿಗುವ ಸುಖ ಎಲ್ಲಿಯೂ ಇಲ್ಲ ಎಂದಿದ್ದಾರೆ ಉರ್ಫಿ.