

ನವದೆಹಲಿ: ಫ್ಯಾಷನ್ ದಿವಾ ಉರ್ಫಿ ಜಾವೇದ್ ಪ್ರತಿ ಬಾರಿ ತಮ್ಮ ಫ್ಯಾಶನ್ ಹ್ಯಾಕ್‌ಗಳ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸುತ್ತಾರೆ. ಉರ್ಫಿಯ ಸ್ಟೈಲ್ ಮತ್ತು ಫ್ಯಾಷನ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತದೆ. 'ಬಿಗ್ ಬಾಸ್ OTT 1' ಖ್ಯಾತಿಯ ಉರ್ಫಿ ತಮ್ಮ ಕೆಲಸಕ್ಕಿಂತ ಸ್ಟೈಲ್ಗೆ ಹೆಚ್ಚು ಜನಪ್ರಿಯರಾಗಿದ್ದಾರೆ. ಇದೀಗ ಮತ್ತೊಮ್ಮೆ ಉರ್ಫಿ ವಿಶಿಷ್ಟ ಮತ್ತು ವಿಚಿತ್ರವಾದ ಉಡುಪಿನಿಂದ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ. ಈ ಬಾರಿ ಉರ್ಫಿ ಡ್ರೆಸ್ ಮಾಡಿರುವುದನ್ನು ನೋಡಿದ್ರೆ ಖಂಡಿತ ಶಾಕ್ ಆಗ್ತೀರ. ಹೌದು, ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಕೂದಲು ಬಾಚಣಿಗೆಯನ್ನೂ ಬಿಟ್ಟಿಲ್ಲ. ಆದರೆ ಉರ್ಫಿ ಎಂದಿನಂತೆ ಈ ಬಾರಿಯೂ ತುಂಬಾ ಕೂಲ್ ಆಗಿ ಕಾಣುತ್ತಿದ್ದಾರೆ.
ಉರ್ಫಿ ಜಾವೇದ್ ಅವರ ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋದಲ್ಲಿ ಉರ್ಫಿ ತನ್ನ ತಂಗಿ ಆಸ್ಪಿ ಜೊತೆ ಕಾಣಿಸಿಕೊಂಡಿದ್ದಾರೆ. ಉರ್ಫಿ ತನ್ನ ತಂಗಿ ಆಸ್ಫಿಯ ಕೂದಲನ್ನು ಬಾಚುತ್ತಿದ್ದಾರೆ. ಆದರೆ ಅವಳು ಕೋಪಗೊಂಡು ಹೊರಟು ಹೋಗುತ್ತಾಳೆ. ನಂತರ ಉರ್ಫಿ ಬಾಚಣಿಗೆಯನ್ನು ನೋಡಿ ಉಡುಪನ್ನು ಮಾಡಲು ಯೋಚಿಸುತ್ತಾರೆ. ಥಟ್ ಅಂಥ ಮುಂದಿನ ವಿಡಿಯೋದಲ್ಲಿ, ಉರ್ಫಿ ಮತ್ತೆ ವರ್ಣರಂಜಿತ ಬಾಚಣಿಗೆಗಳಿಂದ ಮಾಡಿದ ಉಡುಪನ್ನು ಪ್ರದರ್ಶಿಸುತ್ತಿದ್ದಾರೆ. ಈ ಗಿಡ್ಡ ಉಡುಗೆಯಲ್ಲಿ ಉರ್ಫಿಯ ಮೈಮೇಲೆ ಹಲವು ಬಾಚಣಿಗೆಗಳು ಸುತ್ತಿಕೊಂಡಿವೆ.
ಉರ್ಫಿಯ ಈ ಲುಕ್ ನೋಡಿ ಕಾಮೆಂಟ್ ವಿಭಾಗದಲ್ಲಿ ಬಳಕೆದಾರರು ಮನೆಯ ವಸ್ತುಗಳನ್ನು ಉಳಿಸಲು ಉರ್ಫಿಗೆ ಮನವಿ ಮಾಡಿದ್ದಾರೆ. ಕೆಲವು ಅಭಿಮಾನಿಗಳು ಉರ್ಫಿಯ ಫ್ಯಾಶನ್ ಹ್ಯಾಕ್‌ಗಳನ್ನು ಪ್ಯಾರಿಸ್ ಫ್ಯಾಶನ್ ವೀಕ್ಸ್‌ಗೆ ಹೋಲಿಸಿದ್ದಾರೆ.
ಉರ್ಫಿಯ ಅತಿರೇಕದ ಫ್ಯಾಶನ್ ಹ್ಯಾಕ್‌ಗಳು ಹೊಸದೇನಲ್ಲ. ನಟಿ ಗ್ಲಾಸ್, ಬ್ಲೇಡ್‌ಗಳು, ಟಾಯ್ಲೆಟ್ ಪೇಪರ್‌ಗಳಿಂದ ಗೋಣಿ ಚೀಲಗಳು ಮತ್ತು ಪ್ಲಾಸ್ಟಿಕ್ ಚೀಲಗಳಿಂದ ಬಟ್ಟೆಗಳನ್ನು ತಯಾರಿಸಿದ್ದಾರೆ. ಉರ್ಫಿ ಜಾವೇದ್ ತನ್ನ ವಿಶಿಷ್ಟವಾದ ಫ್ಯಾಶನ್ ಸೆನ್ಸ್‌ಗಾಗಿ ಇನ್‌ಸ್ಟಾಗ್ರಾಂನಲ್ಲಿ ಬಹಳ ಜನಪ್ರಿಯತೆ ಗಳಿಸಿದ್ದಾರೆ.