

ನವದೆಹಲಿ: ವಿಚಿತ್ರ ವಿನ್ಯಾಸದ ಉಡುಗೆ ಧರಿಸಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಉರ್ಫಿ ಜಾವೇದ್ ಸದಾ ಸುದ್ದಿಯಾಗುತ್ತಿರುತ್ತಾರೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಾರೆ. ಇದೀಗ ಹುಟ್ಟು ಹಬ್ಬದ ನಿಮಿತ್ತ ಆಯೋಜನೆಯಾಗಿದ್ದ ಪಾರ್ಟಿಯೊಂದರಲ್ಲಿ ವಿಚಿತ್ರವಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಟ್ರೋಲ್ ಆಗಿದ್ದಾರೆ.
ಪ್ರಚಾರಕ ಸಂಜಿತ್ ಅಸ್ಗಾಂವ್ಕರ್(Publicist) ಜನ್ಮದಿನದಂದು ಆಯೋಜನೆಗೊಂಡಿದ್ದ ಪಾರ್ಟಿಯಲ್ಲಿ ಉರ್ಫಿ ಜಾವೇದ್ ಯಾರೂ ಊಹಿಸದಂತೆ ಬಟ್ಟೆ ಧರಿಸಿ ಆಗಮಿಸಿದ್ದರು. ಇದೀಗ ಉರ್ಫಿ ವಿಭಿನ್ನವಾಗಿ ಉಡುಪು ತೊಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ. ಉರ್ಫಿ ಜಾವೇದ್ ತುಂಡುಡುಗೆ ಧರಿಸಿಕೊಂಡು ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದು, ಎದೆಯ ಭಾಗವನ್ನು ಹೃದಯದ ಸಂಕೇತವಿರುವ ವಸ್ತುವೊಂದರಿಂದ ಮುಚ್ಚಿಕೊಂಡಿದ್ದಾರೆ.
ಪಾರ್ಟಿಯಲ್ಲಿ ಉರ್ಫಿ ಜಾವೇದ್ ಆಗಮಿಸುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆ, ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಉರ್ಫಿ ಬರುತ್ತಿದ್ದಂತೆ ಸುತ್ತುವರಿದ ಫ್ಯಾನ್ಸ್ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಕೊನೆಗೆ ಅಂಗರಕ್ಷಕರ ಸಹಾಯದಿಂದ ಉರ್ಫಿ ಒಳ ಬರಬೇಕಾಗಿ ಬಂತು ಎಂದು ವರದಿಯಾಗಿದೆ.