ಹೋಟೆಲ್​ಗೆ ಪ್ರವೇಶ ನಿರಾಕರಣೆ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ ಉರ್ಫಿ

urfi javed
Published on

ಮುಂಬೈ: ಹಿಂದಿ ಬಿಗ್​ ಬಾಸ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದ ಉರ್ಫಿ ಜಾವೇದ್​ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.

ವಿಭಿನ್ನವಾದ ಬಟ್ಟೆಗಳನ್ನು ಧರಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುವ ಉರ್ಫಿಗೂ ವಿವಾದಕ್ಕೂ ಎಲ್ಲಿಲ್ಲದ ನಂಟು.

ಪ್ರವೇಶ ನಿರಾಕರಣೆ

ಸದಾ ತಮ್ಮ ತುಂಡು ಉಡುಗೆಯ ಮೂಲಕ ಸುದ್ದಿಯಲ್ಲಿರುವ ನಟಿ ಈಗ ಮತ್ತೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದ್ದು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Urfi story

ಮುಂಬೈನ ಹೋಟೆಲ್​ ಒಂದಕ್ಕೆ ನಟಿ ಭೇಟಿ ನೀಡಿದ ವೇಳೆ ಆಕೆಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಆಕೆ ಉಡುವ ಬಟ್ಟೆಗಳೆ ಆಕೆಯ ಪಾಲಿಗೆ ಮುಳುವಾಗಿದ್ದು ಈ ಬಗ್ಗೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಆಕ್ರೋಶವನ್ನು ಹೊರಹಾಕಿದ್ದಾರೆ.

ನೀವು ಒಪ್ಪದಿದ್ದರೂ ಪರವಾಗಿಲ್ಲ

ಇದು ನಿಜವಾಗಿಯೂ 21ನೇ ಶತಮಾನದ ಮುಂಬೈ ನಗರಾನ. ಇಂದು ನನಗೆ ರೆಸ್ಟೋರೆಂಟ್​ನಲ್ಲಿ ಪ್ರವೇಶವನ್ನುನಿರಾಕರಿಸಲಾಗಿದೆ.

ನಾನು ಉಡುವ ಬಟ್ಟೆಗಳನ್ನು ನೀವು ಒಪ್ಪದಿದ್ದರೂ ಪ್ರವಾಗಿಲ್ಲ ಹಾಗೆಂದ ಮಾತ್ರಕ್ಕೆ ನೀವು ನನ್ನನ್ನು ವಿಭಿನ್ನವಾಗಿ ನೋಡುವ ಅವಶ್ಯಕತೆಯಿಲ್ಲ. ದಯವಿಟ್ಟು ಕುಂಟು ನೆಪಗಳನ್ನು ನೀಡಬೇಡಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net