ಕಾಜೋಲ್​ಗೆ ಮುತ್ತು ಕೊಟ್ಟ ಉರ್ಫಿ ಜಾವೇದ್; ಸ್ನೇಹಿತೆಯರ ಸಂಬಂಧದ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದ ಫೋಟೋ ..

Urfi Javeds Cosy Pic With Friend Kajol Stir Up Relationship Speculations
Published on

ಉರ್ಫಿ ಜಾವೇದ್, ಕಾಜೋಲ್ ಸಂಬಂಧದ ಬಗ್ಗೆ ಊಹಾಪೋಹ

ಮುಂಬೈ: ಜಾಗತಿಕ ಫ್ಯಾಷನ್ ಕ್ಷೇತ್ರದಲ್ಲಿ, ಉರ್ಫಿ ಜಾವೇದ್ ಅವರು ವಿಶಿಷ್ಟವಾಗಿ ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದಾರೆ. ಸದಾ ಸುದ್ದಿಯಲ್ಲಿರುವ ಈಕೆ ಕುರಿತಾಗಿ ಗುಸುಗುಸು ಶುರುವಾಗಿದೆ.

ವಿಚಿತ್ರವಾದ ಫ್ಯಾಷನ್​ ನಿಂದ ಕಾಣಿಸಿಕೊಳ್ಳುವ ಉರ್ಫಿ ಫೋಟೋ, ವಿಡಿಯೋಗಳ ಮಧ್ಯೆ ಇದೀಗ ಉರ್ಫಿ ಅವರ ಫೋಟೋವೊಂದು ವೈರಲ್‌ ಆಗಿದೆ. ಇದರಲ್ಲಿ ಅವರು ಅವರ ಫ್ರೆಂಡ್‌ ಕಾಜಲ್ ತ್ಯಾಗಿ ಜೊತೆಗೆ ಲಿಪ್‌ಲಾಕ್ ಮಾಡಿದ್ದಾರೆ. ಇದು ಅವರ ಲೈಂಗಿಕ ದೃಷ್ಟಿಕೋನದ ಬಗ್ಗೆ ಬಾರೀ ಚರ್ಚೆಗೆ ಕಾರಣವಾಗಿದೆ.

ವಾಸ್ತವವಾಗಿ ಈ ಹಿಂದೆ ಉರ್ಫಿ ಪುರುಷರೊಂದಿಗೆ ಸಂಬಂಧವನ್ನು ಹೊಂದಿದ್ದರು. ಆದರೆ ಈಗ ಉರ್ಫಿ ಕಾಜಲ್ ಅವರ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಯು ಆಘಾತಕಾರಿಯಾಗಿದೆ. ಉರ್ಫಿ ದ್ವಿಲಿಂಗಿಯೇ ಎನ್ನುವ ಪ್ರಶ್ನೆಯನ್ನು ನೆಟ್ಟಿಗರು ಮಾಡಿದ್ದಾರೆ.

ಉರ್ಫಿ ಅವರು ಲಂಚ್‌ ಅಥವಾ ರಾತ್ರಿ ಊಟಕ್ಕೆ ಹೊರಗೆ ಹೋಗುವಾಗ ಹೀಗೆ ಹಲವು ಸಂದರ್ಭಗಳಲ್ಲಿ ಕಾಜಲ್‌ ತ್ಯಾಗಿ ಅವರೊಂದಿಗೆ ಕಾಣಿಸಿಕೊಳ್ಳುತ್ತಾರೆ. ಕಾಜಲ್ ಅವರೊಂದಿಗಿನ ಸಂಬಂಧವನ್ನು ಉರ್ಫಿ ಎಂದಿಗೂ ಬಹಿರಂಗಪಡಿಸಲಿಲ್ಲ, ಆದರೂ ಅವರ ಸಂಬಂಧವು ಸ್ನೇಹಕ್ಕಿಂತ ಹೆಚ್ಚಾಗಿ ಕಂಡುಬರುತ್ತದೆ ಮತ್ತು ಈಗ ವೈರಲ್‌ ಆಗಿರುವ ಇಬ್ಬರ ಲಿಪ್‌ಲಾಕ್‌ ಫೋಟೋ ಎಲ್ಲ ರೂಮರ್‌ಗಳು ನಿಜ ಎಂಬ ಅರ್ಥ ನೀಡಿದೆ. ಇನ್ನೂ, ಅವರು ಸಂಬಂಧದಲ್ಲಿರುವುದನ್ನು ಖಚಿತಪಡಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net