ಯುಪಿಎಸ್​ಸಿ ಸಿವಿಲ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷೆಯ ಫಲಿತಾಂಶ ಪ್ರಕಟ

upsc
Published on

ದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 2023ರ ಸಿವಿಲ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಪರೀಕ್ಷಿಸಬಹುದಾಗಿದೆ.

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಮೇ 28ರಂದು ಸಿವಿಲ್ ಸರ್ವಿಸಸ್ ಪ್ರಿಲಿಮಿನರಿ ಪರೀಕ್ಷೆಯನ್ನು(CSE) ಯಶಸ್ವಿಯಾಗಿ ನಡೆಸಿತ್ತು. ಸದ್ಯ, ಆಯೋಗವು ಈ ಪರೀಕ್ಷೆಯ ಫಲಿತಾಂಶವನ್ನು ತನ್ನ ವೆಬ್​ಸೈಟ್​ನಲ್ಲಿ ಇಂದು ಪ್ರಕಟಿಸಿದೆ.

ಯುಪಿಎಸ್​ಸಿ ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶ ಹೀಗೆ ಪರಿಶೀಲಿಸಿ:
ಅಭ್ಯರ್ಥಿಗಳು ಯುಪಿಎಸ್​ಸಿಯ ಅಧಿಕೃತ ವೆಬ್​ಸೈಟ್​ https://www.upsc.gov.in/ ಗೆ ಭೇಟಿ ನೀಡಿ. ಮುಖಪುಟದಲ್ಲಿ ಫಲಿತಾಂಶಗಳು ಅಥವಾ ಪರೀಕ್ಷೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಯುಪಿಎಸ್​ಸಿ ವಿವಿಧ ಪರೀಕ್ಷೆಗಳನ್ನು ನಡೆಸುತ್ತದೆ ಹಾಗಾಗಿ ನೀವು ಬರೆದ ಪರೀಕ್ಷೆಯ ಫಲಿತಾಂಶದ ಲಿಂಕ್​ ಮೇಲೆ ಕ್ಲಿಕ್​ ಮಾಡಿ ಫಲಿತಾಂಶವನ್ನು ಪರೀಕ್ಷಿಸಬಹುದಾಗಿದೆ.

ಪರೀಕ್ಷಾ ಫಲಿತಾಂಶದ ಕುರಿತು ಯಾವುದೇ ಪ್ರಶ್ನೆಗಳನ್ನು ಪರಿಹರಿಸಲು ಅಥವಾ ಸ್ಪಷ್ಟಿಕರಣವನ್ನು ಪಡೆಯಲು, ಹೊಸ ದೆಹಲಿಯ ಷಹಜಹಾನ್ ರಸ್ತೆಯಲ್ಲಿರುವ ಕೇಂದ್ರ ಲೋಕಸೇವಾ ಆಯೋಗದ ಆವರಣದಲ್ಲಿ ಫೆಸಿಲಿಟೇಶನ್ ಕೌಂಟರ್​​ನ್ನು ಸ್ಥಾಪಿಸಿದೆ. ಅಭ್ಯರ್ಥಿಗಳು ಕೌಂಟರ್‌ಗೆ ಖುದ್ದಾಗಿ ಭೇಟಿ ನೀಡಬಹುದು ಅಥವಾ ಯುಪಿಎಸ್​ಸಿಯ ವೆಬ್​ಸೈಟ್​ನಲ್ಲಿರುವ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net