ಯುಪಿಎಸ್ಸಿ ಪರೀಕ್ಷೆಯಲ್ಲಿ ಶಂಕರ್ ಐಎಎಸ್ ಅಕಾಡೆಮಿಯ ಸಾಧನೆ

Published on

ಬೆಂಗಳೂರು:
ಯೂನಿಯನ್ ಪಬ್ಲಿಕ್ ಸರ್ವೀಸಸ್ ಕಮಿಷನ್ ಂ, ಮತ್ತು ಈ ಹುದ್ದೆಗಳಿಗೆ ನಡೆಸಿದ ನಾಗರೀಕ ಸೇವೆಗಳ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 1016 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ.
ಶಂಕರ್ ಐಎಎಸ್ ಅಕಾಡೆಮಿಯ 273 ವಿದ್ಯಾರ್ಥಿಗಳು ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ (ಎಲ್ಲಾ
ಕೇಂದ್ರಗಳು) ತೇರ್ಗಡೆಯಾಗಿದ್ದಾರೆ. ಟಾಪ್ 100 ರ‌್ಯಾಂಕ್‌ಗಳಲ್ಲಿ 21 ಅಭ್ಯರ್ಥಿಗಳು ಶಂಕರ್ ಐಎಎಸ್ ಅಕಾಡೆಮಿಗೆ ಬಂದಿವೆ. ಈ 21 ಅಭ್ಯರ್ಥಿಗಳಲ್ಲಿ 4 ಮಹಿಳೆಯರು ಇದ್ದಾರೆ.
ಶಿವಂ ಕುಮಾರ್ ಅವರು 19ನೇ ರ‌್ಯಾಂಕ್, ಅರ್ಚನಾ ಅವರು 40ನೇ ರ‌್ಯಾಂಕ್ ಗಳಿಸಿದ್ದು, ಇಬ್ಬರೂ ಬೆಂಗಳೂರಿನ ಶಂಕರ್ ಐಎಎಸ್ ಅಕಾಡೆಮಿಯಲ್ಲಿ ಸಂದರ್ಶನ ಮಾರ್ಗದರ್ಶನ ಕಾರ್ಯಕ್ರಮವನ್ನು ತೆಗೆದುಕೊಂಡಿದ್ದರು.
ಈ ವರ್ಷ ರಾಜ್ಯದಿಂದ ಸುಮಾರು 28 ಅಭ್ಯರ್ಥಿಗಳು ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ರಾಜ್ಯದಿಂದ ಆಯ್ಕೆಯಾದ 28 ಅಭ್ಯರ್ಥಿಗಳಲ್ಲಿ 20 ಅಭ್ಯರ್ಥಿಗಳು ಶಂಕರ್ ಐಎಎಸ್ ಅಕಾಡೆಮಿ ಬೆಂಗಳೂರಿನವರು.

ಐಎ್ಎಸ್ ತೇರ್ಗಡೆ
ಕೇಂದ್ರ ಸಾರ್ವಜನಿಕ ಸೇವಾ ಆಯೋಗವು ನಡೆಸಿದ ಭಾರತೀಯ ಅರಣ್ಯ ಸೇವೆಗಳ ಪರೀಕ್ಷೆಯಲ್ಲಿ 147 ಅಭ್ಯರ್ಥಿಗಳು ತೇರ್ಗಡೆಯಾಗಿದ್ದು, ಅದರಲ್ಲಿ ಶಂಕರ್ ಐಎಎಸ್ ಅಕಾಡೆಮಿಯ 102
ವಿದ್ಯಾರ್ಥಿಗಳು ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಪಾಸಾಗಿರುವುದು ವಿಶೇಷ. ಟಾಪ್ 100 ರ‌್ಯಾಂಕ್‌ಗಳಲ್ಲಿ 81 ಅಭ್ಯರ್ಥಿಗಳು ಶಂಕರ್ ಐಎಎಸ್ ಅಕಾಡೆಮಿಯವರಾಗಿದ್ದಾರೆ. 9 ಅಭ್ಯರ್ಥಿಗಳು ಬೆಂಗಳೂರು ಕೇಂದ್ರದಿಂದ ತೇರ್ಗಡೆಯಾಗಿದ್ದು, ಇದರಲ್ಲಿ ರಾಹುಲ್ ಗೌಡ ಆರ್ ರವರು 20 ನೇ ರ‌್ಯಾಂಕ್ ಮತ್ತು ನಿಶಾ ಅವರು ಅಖಿಲ ಭಾರತ ಮಟ್ಟದಲ್ಲಿ 90ನೇ ರ‌್ಯಾಂಕ್ ಪಡೆದಿದ್ದಾರೆ. ಇವರು ಕೂಡ ಶಂಕರ್
ಐಎಎಸ್ ಅಕಾಡೆಮಿ ಬೆಂಗಳೂರಿನಲ್ಲಿ ಪ್ರಿಲಿಮ್ಸ್ ಮತ್ತು ಲಿಖಿತ ಪರೀಕ್ಷೆ
ಕಾರ್ಯಕ್ರಮದ ತರಬೇತಿ ಪಡೆದಿದ್ದರು.
ಸೌಮ್ಯ ಆರ್.ಎ. 33ನೇ ರ‌್ಯಾಂಕ್ ಗಳಿಸಿದ್ದು, ಬೆಂಗಳೂರು ಶಾಖೆಯಿಂದ ಮುಖ್ಯ ಐಚ್ಛಿಕ
ಕಾರ್ಯಕ್ರಮವನ್ನು ತೆಗೆದುಕೊಂಡಿದ್ದರು.
ಮುಂಬರುವ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾತಿ ಶುರುವಾಗಿದೆ. ಬ್ಯಾಚ್‌ಗಳು ಜೂ.19 ಮತ್ತು ಆಗಸ್ಟ್ 22 ರಿಂದ ಪ್ರಾರಂಭವಾಗುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net