

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು 2023ರಲ್ಲಿ ನಡೆಸಿದ ನಾಗರೀಕ ಸೇವೆಗಳ ಅಂತಿಮ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.
2023ರ ಸೆಪ್ಟೆಂಬರ್ 15, 16, 17, 23 ಮತ್ತು 24ರಂದು ನಡೆದ ಪರೀಕ್ಷೆಗಳಲ್ಲಿ ನಾಗರಿಕ ಸೇವೆಗಳ ಮುಖ್ಯ ಸಂದರ್ಶನ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಸೇವಾ ಆಯೋಗವು 2024ರ ಮೊದಲ ಎರಡು ತಿಂಗಳುಗಳಲ್ಲಿ ಸಂದರ್ಶಿಸಿತು.
ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 2023ರ ಅಂತಿಮ ಪರೀಕ್ಷೆಯ ಫಲಿತಾಂಶವನ್ನು ಇಂದು (16, ಏಪ್ರಿಲ್, 2024) ಪ್ರಕಟಿಸಲಾಗಿದೆ. ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್ ಆಗೊ ಹೊರಹೊಮ್ಮಿದ್ದಾರೆ. 2023 ಯುಪಿಎಸ್‌ಸಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಇದೀಗ ತಮ್ಮ ಫಲಿತಾಂಶವನ್ನು ಆಯೋಗದ ವೆಬ್‌ಸೈಟ್ https://upsc.gov.in/ ರಿಜಿಸ್ಟರ್ ನಂಬರ್ ಮತ್ತು ಹೆಸರಿನ ಪ್ರಕಾರ ಚೆಕ್ ಮಾಡಿಕೊಳ್ಳಬಹುದು.
UPSC ತನ್ನ ಕ್ಯಾಂಪಸ್‌ನಲ್ಲಿರುವ ಪರೀಕ್ಷಾ ಹಾಲ್‌ನ ಬಳಿ “ಸಂಪರ್ಕ ಕೌಂಟರ್” ಅನ್ನು ತೆರೆದಿದೆ. ಅಭ್ಯರ್ಥಿಗಳು ತಮ್ಮ ಪರೀಕ್ಷೆಗಳು/ನೇಮಕಾತಿಗಳ ಕುರಿತು ಯಾವುದೇ ಮಾಹಿತಿ/ಸ್ಪಷ್ಟೀಕರಣವನ್ನು ಕೆಲಸದ ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 23385271/23381125/23098543 ಮೂಲಕ ಪಡೆಯಬಹುದು.