

UPSC: ಕೇಂದ್ರ ಸಾರ್ವಜನಿಕ ಆಯೋಗ (UPSC) ಪ್ರಕಾರ, 2025 ರ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆ (ನಾಳೆ) ಆಗಸ್ಟ್ 22 ರಿಂದ ಪ್ರಾರಂಭವಾಗಲಿದ್ದು, ಒಟ್ಟು 5 ದಿನಗಳವರೆಗೆ ಪರೀಕ್ಷೆ ನಡೆಯಲಿದೆ ಎಂದು ತಿಳಿಸಲಾಗಿದೆ.
ಪ್ರತಿದಿನ 2 ಸೆಷನ್ಗಳು ನಡೆಯಲಿದ್ದು, ಬೆಲಿಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2:30 ರಿಂದ 5:30ರವರೆಗೆ ನಡೆಯಲಿದೆ. ಇನ್ನು ಒಟ್ಟು 9 ಪೇಪರ್ಗಳಿದ್ದು, ಇವುಗಳಲ್ಲಿ 2 ಅರ್ಹತಾ (Qualifying) ಪೇಪರ್‌ಗಳು ಮತ್ತು 7 ಮೆರಿಟ್ ರ‍್ಯಾಂಕಿಂಗ್‌ಗೆ ಲೆಕ್ಕಿಸಲಾಗುತ್ತದೆ.
ಪರೀಕ್ಷೆಯ ಪ್ರವೇಶ ಪತ್ರಗಳು ಆನ್ಲೈನ್ನಲ್ಲಿ ಲಭ್ಯುವಿದ್ದು, ಅಭ್ಯರ್ಥಿಗಳು ಇದನ್ನು upsc.gov.in ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಾಗಿದೆ.
* UPSC ಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ
* UPSC ಮುಖ್ಯ ಇ-ಪ್ರವೇಶ ಕಾರ್ಡ್ 2025 ಲಿಂಕ್ ಮೇಲೆ ಕ್ಲಿಕ್ ಮಾಡಿ
* ನಿಮ್ಮ ಲಾಗಿನ್ ಮಾಹಿತಿಯನ್ನು ನಮೂದಿಸಿದ ನಂತರ, "ಸಲ್ಲಿಸು" ಕ್ಲಿಕ್ ಮಾಡಿ
* ಭವಿಷ್ಯದ ಬಳಕೆಗಾಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿದ ನಂತರ ಮುದ್ರಿಸಿ
1. ಅಭ್ಯರ್ಥಿಯ ಹೆಸರು
2. ಅಭ್ಯರ್ಥಿಯ ಭಾವಚಿತ್ರ
3. ಅಭ್ಯರ್ಥಿಯ ಸಹಿ
4. ರೋಲ್ ಸಂಖ್ಯೆ
(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಹೆಚ್ಚಿನ ವಿವರಗಳಿಗೆ ಅಧಿಕೃತ UPSC ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ