ಕೇವಲ 9 ಗಂಟೆ ನಿದ್ದೆ ಮಾಡಿ 9 ಲಕ್ಷ ರೂ. ಗೆದ್ದಳು! sleep

Sleep
Published on

sleep :  ಯುಪಿಎಸ್​ಸಿ ಆಕಾಂಕ್ಷಿ ಯುವತಿಯೊಬ್ಬರು 9 ಗಂಟೆ ಚೆನ್ನಾಗಿ ನಿದ್ದೆ ಮಾಡಿದ್ದರಿಂದ ರಾತ್ರೋರಾತ್ರಿ ಲಕ್ಷಪತಿಯಾಗಿದ್ದಾರೆ. ಬರೋಬ್ಬರಿ 9.1ಲಕ್ಷ ರೂಪಾಯಿ ಗೆದ್ದುಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ 60 ದಿನಗಳ ಸ್ಲೀಪ್​ ಇಂಟರ್ನ್​ಶಿಪ್​ನಲ್ಲಿ ಪುಣೆ ಮೂಲದ ಐಪಿಎಸ್​ ಆಕಾಂಕ್ಷಿ ಪೂಜಾ ಮಾಧವ್ ವಾವ್ಹಾಲ್ ಅವರು ‘ಸ್ಲೀಪ್ ಚಾಂಪಿಯನ್​ ಆಫ್​ ದಿ ಇಯರ್’​ ಆಗಿ ಹೊರಹೊಮ್ಮಿದ್ದಾರೆ. ಎರಡು ತಿಂಗಳವರೆಗೆ ಪ್ರತಿರಾತ್ರಿ ಸರಾಸರಿ 9 ಗಂಟೆ ನಿದ್ದೆ ಮಾಡುವ ಮೂಲಕ ಎಲ್ಲರನ್ನೂ ಹಿಂದಿಕ್ಕಿ ಪೂಜಾ 9.1 ಲಕ್ಷ ರೂಪಾಯಿಗಳ ಕ್ಯಾಶ್​ ಪ್ರೈಜ್ ಗೆದ್ದುಕೊಂಡಿದ್ದಾರೆ.

ಭಾರತದಲ್ಲಿ ನಿದ್ರೆಯನ್ನು ಎಷ್ಟು ಕೆಟ್ಟದಾಗಿ ನಿರ್ಲಕ್ಷಿಸಲಾಗುತ್ತದೆ ಎಂಬುದರ ಕುರಿತು ಜಾಗೃತಿ ಮೂಡಿಸಲು ಸ್ಲೀಪ್ ಚಾಂಪಿಯನ್​ ಆಫ್​ ದಿ ಇಯರ್ ಆಯೋಜನೆ ಮಾಡಲಾಗಿತ್ತು. ಇಡೀ ದೇಶದ್ಯಾಂತ ಒಟ್ಟು 1 ಲಕ್ಷ ಜನರು ಇಂಟರ್ನ್​​ಶಿಪ್​ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಕೇವಲ 15 ಜನರು ಮಾತ್ರ ಆಯ್ಕೆ ಆಗಿದ್ದರು.

91.36 ಅಂಕಗಳೊಂದಿಗೆ ಎಲ್ಲರನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದು 9.1 ಲಕ್ಷ ರೂಪಾಯಿಗಳ ನಗದು ಬಹುಮಾನ ಪಡೆದುಕೊಂಡಿದ್ದಾರೆ. ಇವರ ಜೊತೆಗೆ ಎರಡು ತಿಂಗಳವರೆಗೆ ಫೈನಲ್​ವರೆಗೆ ಪೈಪೋಟಿ ಕೊಟ್ಟಿದ್ದ 14 ಅಭ್ಯರ್ಥಿಗಳಿಗೆ ತಲಾ ಒಂದೊಂದು ಲಕ್ಷ ರೂಪಾಯಿಗಳನ್ನು ನೀಡಲಾಗಿದೆ.

ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲಾ 15 ಇಂಟರ್ನ್‌ಗಳಿಗೆ ತಲಾ 1 ಲಕ್ಷ ರೂ. ಬಹುಮಾನ ನೀಡಲಾಯಿತು. ಭಾರತದ ಅತ್ಯಂತ ಶಿಸ್ತಿನ ಸ್ಲೀಪರ್ ಎಂಬ ಬಿರುದನ್ನು ಪೂಜಾ ಮಾಧವ್ ವಾವ್ಹಾಲ್ ತಂದುಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net