ಆ ವಿಷಯದಲ್ಲಿ ಚರಣ್ ಬಗ್ಗೆ ಅಸೂಯೆ..ಹೀಗೇಕೆ ಅಂದರು ಉಪಾಸನಾ?

ramcharan
Published on

ಹೈದರಾಬಾದ್​: ನಟ ರಾಮ್ ಚರಣ್ ಮತ್ತು ಉಪಾಸನಾ ತಮ್ಮ ಮುದ್ದು ಮಗಳು ಕ್ಲೀಂಕಾರಾ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಅವಳನ್ನು ಬೆಳೆಸುವಲ್ಲಿ ಪಾಲಕರಾಗಿ ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತೇವೆ ಎಂದು ಉಪನಾಸ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಹೆಣ್ಣುಮಕ್ಕಳಿಗೆ ಅಮ್ಮನಿಗಿಂತ ಅಪ್ಪನ ಮೇಲೆ ಪ್ರೀತಿ ಜಾಸ್ತಿ ಎಂಬುದು ಎಲ್ಲರ ಭಾವನೆ. ಅದೇ ರೀತಿ ನನ್ನ ಮಗಳೂ ಅಪ್ಪನ ಕಡೆಗೇ ಹೆಚ್ಚು ಪ್ರೀತಿ ತೋರುತ್ತಾಳೆ. ತಂದೆ ತಾಯಿಯಾಗಿ ನಾವಿಬ್ಬರೂ ನಮ್ಮ ಜವಾಬ್ದಾರಿಯನ್ನು ಸಮಾನವಾಗಿ ನಿಭಾಯಿಸುತ್ತೇವೆ. ಹಾಗೆ ಮಾಡೋದು ತುಂಬಾ ಒಳ್ಳೆಯದು ಸಹ ಹಾಗಿದೆ. . ಆದ್ರೆ ಕ್ಲೀಂಕಾರಾ ತುಂಬಾ ನಾಚಿಕೆ ಸ್ವಭಾವದವಳು. ಚರಣ್(ಅಪ್ಪ)ನ ಮುಖ ನೋಡಿದ ಕೂಡಲೇ ಅವಳ ಮುಖ ಅರಳುತ್ತದೆ. ಎಂದು ಹೇಳಿದ್ದಾರೆ.

ರಾಮ್ ಚರಣ್ ರೊಮ್ಯಾಂಟಿಕ್ಸೀನ್​ಗಳಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಪ್ರತಿಕ್ರಿಯಿಸಿ, "ನಾವಿಬ್ಬರೂ ಬೇರೆ ಬೇರೆ ಕ್ಷೇತ್ರದಿಂದ ಬಂದವರು. ಚರಣ್‌ ನಾಯಕಿಯರೊಂದಿಗಿನ ದೃಶ್ಯಗಳನ್ನು ನೋಡಲು ನನಗೆ ಮುಜುಗರವಾಗುತ್ತಿತ್ತು. ನಾನು ಕೇಳುತ್ತಿದ್ದೆ "ಇದು ಅಗತ್ಯವಿದೆಯೇ? ಎಂದು. ಅದಕ್ಕೆ ರಾಮ್​ ಚರಣ್​ ಹೇಳುತ್ತಿದ್ದರು. ಅರ್ಥ ಮಾಡಿಕೋ, ನನ್ನ ವೃತ್ತಯೇ ಅದು ಎಂದು ಹೇಳುತ್ತಿದ್ದರು ಎಂದು ತಿಳಿಸಿದ್ದಾರೆ.

ಸದ್ಯ, ರಾಮ್ ಚರಣ್ 'ಗೇಮ್ ಚೇಂಜರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಶಂಕರ್ ಇದನ್ನು ರಾಜಕೀಯ ಆಕ್ಷನ್ ಥ್ರಿಲ್ಲರ್ ಕಥೆಯಾಧಾರಿತ ಚಿತ್ರವಾಗಿ ತೆರೆಗೆ ತರುತ್ತಿದ್ದಾರೆ. ಕಿಯಾರಾ ನಾಯಕಿ. ಎಸ್.ಜೆ. ಸೂರ್ಯ, ಸುನಿಲ್ ಮತ್ತು ಶ್ರೀಕಾಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಾದ ನಂತರ ರಾಮ್ ಚರಣ್ 'ಉಪ್ಪೇನ' ಖ್ಯಾತಿಯ ಬುಚ್ಚಿಬಾಬು ನಿರ್ದೇಶನದಲ್ಲಿ ನಟಿಸಲಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net