ಜಮೀನು ವಿಚಾರಕ್ಕೆ ಗಲಾಟೆ, ಒರ್ವ ಸಾವು

Crime Logo
Published on

ಬೆಂಗಳೂರು: ಜಮೀನು ವಿಚಾರಕ್ಕೆ ಗಲಾಟೆ ನಡೆದಿದ್ದು, ನಂತರ ಮನೆಗೆ ಹೋಗಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕೊಡಿಗೇಹಳ್ಳಿ ಬಳಿಯ ಎನ್.ಟಿ.ಐ ಲೇಔಟ್‌ನಲ್ಲಿ ನಡೆದಿದೆ.

ಪ್ರಕಾಶ್(೪೫) ಮೃತ ರ್ದುದೈವಿ. ಪ್ರಕಾಶ್ ಎಂಬುವವರಿಗೆ ಸೇರಿದ ಜಮೀನು ಎನ್.ಟಿ.ಐ ಕಾಲೋನಿಯಲ್ಲಿದ್ದು, ಈ ಜಮೀನು ವಿಚಾರವಾಗಿ ಸಾಕಷ್ಟು ದಿನಗಳಿಂದ ಕಣ್ಣಪ್ಪ ನಾಗರಾಜ್ ಮತ್ತು ಪ್ರಕಾಶ್ ಅವರ ಮಧ್ಯೆ ಗಲಾಟೆಯಾಗುತ್ತಿತ್ತು. ಸೋಮವಾರ ಮಧ್ಯಾಹ್ನ ೧೨.೩೦ ರ ಸುಮಾರಿಗೆ ಕೂಡ ಇದೇ ವಿಚಾರಕ್ಕೆ ಮತ್ತೆ ಗಲಾಟೆಯಾಗಿದ್ದು, ಈ ವೇಳೆ ಕಣ್ಣಪ್ಪ ನಾಗರಾಜ್, ಇವರ ಮಗ ಅಂನ್ ಮತ್ತು ಪ್ರತಾಪ್‌ಚಂದ್ರ ರಾಥೋಡ್ ಎಂಬುವವರು ಸೇರಿ ಇತರರು ಪ್ರಕಾಶ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಪ್ರಕಾಶ್ ಪೊಲೀಸರಿಗೆ ೆನ್ ಮಾಡಿ ಗಲಾಟೆ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗಲಾಟೆ ಮಾಡಿಕೊಳ್ಳಬೇಡಿ ಕೋರ್ಟ್‌ಗೆ ಹೋಗಿ ಈ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸೂಚಿಸಿ ಇಬ್ಬರನ್ನು ಸಮಾಧಾನಪಡಿಸಿ ಸ್ಥಳದಿಂದ ಕಳಿಸಿದ್ದಾರೆ. ಪೊಲೀಸರ ಸೂಚನೆಯ ಹಿನ್ನೆಲೆಯಲ್ಲೆ ಮನೆಗೆ ಹೋದಾಗ ಪ್ರಕಾಶ್‌ಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಹತ್ತಿರದ ಕ್ಲಿನಿಕ್‌ಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಇಲ್ಲ ಆಗಲ್ಲ ಎಂದು ಬೇರೊಂದು ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಅದರಂತೆ ಬೇರೆ ಆಸ್ಪತ್ರೆಗೆ ಹೋಗಿದ್ದು, ಪರೀಕ್ಷಿಸಿದ ವೈದ್ಯರು ಪ್ರಕಾಶ್ ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ.

ಇದು ಕೊಲೆ ಎಂಬ ಆರೋಪ:
ಪ್ರಕಾಶ್ ಸಾವನ್ನಪ್ಪಿರುವ ವಿಷಯ ತಿಳಿದ ಕುಟುಂಬ ಸದಸ್ಯರು ಪ್ರಕಾಶ್‌ನದು ಸಹಜ ಸಾವಲ್ಲ ಇದು ಕೊಲೆ, ಗೂಂಡಾಗಳು ಹಲ್ಲೆ ನಡೆಸಿ ಪ್ರಕಾಶ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ೧೦ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವೈದ್ಯರು ಹೃದಯಾಘಾತದಿಂದ ಪ್ರಕಾಶ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಆದರೆ ಕುಟುಂಬ ಸದಸ್ಯರು ಇದು ಕೊಲೆ ಎಂದು ಆರೋಪಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಪ್ರಕಾಶ್ ಸಾವು ಹೇಗಾಯಿತು ಎಂಬುದು ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net