

ಬೆಂಗಳೂರು: ಯುಐ (UI) ರಿಯಲ್ ಸ್ಟಾರ್ ಉಪೇಂದ್ರ ಅವರ ನಟನೆ ಜತೆಗೆ ವರ್ಷಗಳ ಬಳಿಕ ಉಪ್ಪಿ ಡೈರೆಕ್ಟರ್ ಕ್ಯಾಪ್ ತೊಟ್ಟು ಆ್ಯಕ್ಷನ್ ಕಟ್ ಹೇಳಿರೋ ಸಿನಿಮಾ. ಉಪ್ಪಿ ಡೈರೆಕ್ಷನ್ ಅಂದಾಕ್ಷಣ ಬರೀ ಕರ್ನಾಟಕದಲ್ಲಷ್ಟೇ ಅಲ್ಲ ಪ್ರಪಂಚದ ಮೂಲೆ ಮೂಲೆಯಲ್ಲೂ ಇವರ ನಿರ್ದೇಶನಕ್ಕೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಸದ್ಯ ಯುಐ ಅನೌನ್ಸ್ ಆದಾಗಿನಿಂದಲೂ ಸಿನಿಮಾದ ಮೇಲಿರೋ ಕುತೂಹಲ ದುಪ್ಪಟ್ಟಾಗಿದೆ.
ಸದ್ಯ ರಿಲೀಸ್ ಯಾವಾಗ, ಯಾವಾಗ ಅಂತ ಫ್ಯಾನ್ಸ್ ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ. ಈ ಬೆನ್ನಲ್ಲೆ UI ಇದೇ ಡಿಸೆಂಬರ್ 20ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ ಅಂತ ಉಪ್ಪಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಪೋಸ್ಟ್ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಇಷ್ಟು ದೊಡ್ಡ ಸಿನಿಮಾಗೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಜ್ ಕ್ರಿಯೇಟ್ ಆದ್ಮೇಲೆ, ಪ್ರತಿ ಮೂಲೆಯಿಂದ ಪ್ರತಿ ಆಡಿಯನ್ಸ್ಗೆ ದೊಡ್ಡ ಮಟ್ಟದಲ್ಲಿ ಸಿನಿಮಾವನ್ನು ತಲುಪಿಸೋದಕ್ಕೆ ಕರ್ನಾಟಕದಲ್ಲಿ ರಿಲೀಸ್ ಜವಾಬ್ದಾರಿಯನ್ನು ಕೆವಿಎನ್ ಸಂಸ್ಥೆ ಹೊತ್ತಿದೆ.
ಆಂದ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಈಗಾಗಲೇ ದೊಡ್ಡ ಮಟ್ಟಕ್ಕೆ ಹೆಸರಿರುವ ಗೀತಾ ಆರ್ಟ್ಸ್ ಸಂಸ್ಥೆ ಹಂಚಿಕೆ ಮಾಡ್ತಿದೆ. ಇನ್ನೂ ಕೆರಳದಲ್ಲಿ ಎಪಿ ಇಂಟರ್ನ್ಯಾಷನಲ್ ಪ್ರೊಡಕ್ಷನ್ ಹೌಸ್ ಸಿನಿಮಾವನ್ನು ರಿಲೀಸ್ ಮಾಡ್ತಿದೆ. ಓವರ್ ಸೀಸ್ನಲ್ಲಿ ಹೋಮ್ ಸ್ಕ್ರೀನ್ ಎಂಟರ್ಟೈನ್ಮೆಂಟ್ ರಿಲೀಸ್ ಮಾಡ್ತಿದೆ. ಈಗಾಗಲೇ ಸಾಂಗ್ ಹಾಗೂ ಟೀಸರ್ ಎಲ್ಲಾ ಭಾಷೆಯ ಪ್ರೇಕ್ಷಕರನ್ನು ತಲುಪಿದ್ದು, ಇದರ ಬೆನ್ನಲ್ಲೇ ದೊಡ್ಡ ದೊಡ್ಡ ಸಂಸ್ಥೆಗಳು ಯುಐ ಸಿನಿಮಾ ರಿಲೀಸ್ ಜವಾಬ್ದಾರಿಯನ್ನು ಹೊತ್ತಿರೋದು ಸಿನಿಮಾ ಮೇಲಿದ್ದ ನಿರೀಕ್ಷೆ ಮತ್ತಷ್ಟು ದುಪ್ಪಟ್ಟಾಗಿಸಿದೆ.