

Mother: ಪ್ರೇಮಿಯೊಬ್ಬ 5 ಮಕ್ಕಳ ತಾಯಿಗೆ ಥಳಿಸಿದ ಪರಿಣಾಮ ಆಕೆ ಸಾವನ್ನಪ್ಪಿರುವ ಘಟನೆ ಸೋಮವಾರ ನೋಯ್ಡಾದಲ್ಲಿ ನಡೆದಿದೆ. ಈ ಕೃತ್ಯದಲ್ಲಿ ನೀರಜ್ ಬಲಿಪಶುವಾಗಿದ್ದು, ಕೊಲೆ ಮಾಡಿದ ಅರ್ಜುನ್ರನ್ನು ಪೋಲೀಸರು ಬಂಧಿಸಿದ್ದಾರೆ.
ವರದಿಯ ಪ್ರಕಾರ ನೀರಜ್ ಪತಿ ಸತೀಶ್ ಮೂಲತಃ ಬದೌನ್ ಜಿಲ್ಲೆಯ ಹಾಥ್ನಿ ಗುಡ್ ಗ್ರಾಮದ ನಿವಾಸಿಯಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ದಂಪತಿ 5 ಮಕ್ಕಳು ಹಾಗೂ ತನ್ನ ಪತ್ನಿಯೊಂದಿಗೆ ಮಾಮುರ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಇನ್ನು ನೀರಜ್ ಕಳೆದ ಮೂರು ವರ್ಷಗಳಿಂದ ಸಹಜಪುರ ಜಿಲ್ಲೆಯ ಸಾಫುರ್ ಹಳ್ಳಿಯ ಅರ್ಜುನ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈತನು ಕೂಡ ಖಾಸಗಿ ಕಂಪನಿಯೊಂದರಲ್ಲಿ ಮನೆಕೆಲಸಗಾರನಾಗಿ ಕೆಲಸ ಮಾಡುತ್ತಿದ್ದನು.
ಭಯಗೊಂಡ ಅರ್ಜುನ್ ತಕ್ಷಣವೇ ನೀರಜ್ರನ್ನು ಹತ್ತಿರ ಇರುವ ಕೈಲಾಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಇಲ್ಲಿ ಚೇತರಿಕೆ ಕಾಣದಿರುವುದರಿಂದ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲೂ ಸಹ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಧೃಢಪಡಿಸಿದ್ದಾರೆ.
ಸತೀಶ್ಗೆ ಇವರಿಬ್ಬರ ಅಕ್ರಮ ಸಂಬಂಧದ ಬಗ್ಗೆ ಮಾಹಿತಿ ತಿಳಿದಿರಲಿಲ್ಲ. ಸೊಮವಾರ ಸಂಜೆ ನೀರಜ್ ಅರ್ಜುನ್ ಮನೆಗೆ ಭೇಟಿಯಾಗಲು ಬಂದಿದ್ದು, ಇವರಿಬ್ಬರ ನಡುವೆ ಗಲಾಟೆ ಸಂಭವಿಸಿದೆ. ಗಲಾಟೆ ಬಳಿಕ ಅರ್ಜುನ್ ದೈಹಿಕವಾಗಿ ಥಳಿಸಿದ್ದು, ನೀರಜ್ ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದಾಳೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಕುಟುಂಬಸ್ಥರು ನೀರಜ್ಳನ್ನು ಅರ್ಜುನ್ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ.
ಆ ಮಹಿಳೆಯು 13 ವರ್ಷಗಳ ಹಿಂದೆ ಸತೀಶ್ನೊಂದಿಗೆ ಮದುವೆಯಾಗಿದ್ದಳು. ಇವರಿಗೆ 5 ಮಕ್ಕಳಿದ್ದವು. ಇನ್ನೂ ಸತೀಶ್ ನೀರಜ್ಳನ್ನು ಪೂರ್ವಜರ ಹಳ್ಳಿಯಿಂದ ನೋಯ್ಡಾಗೆ ಕರೆದುಕೊಂಡು ಬಂದಿದ್ದನು. ಇಲ್ಲಿ ಆಕೆ ಅಜುರ್ನ್ನೊಂದಿಗೆ ಸ್ನೇಹ ಮಾಡಿದ್ದಳು. ಈ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಹಾಗೂ ಅರ್ಜುನ್ 24 ವರ್ಷದ ಯುವಕ ಇವನಿಗೆ ಮದುವೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)