Central Cabinet : ಕೃಷಿ, ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದ 3 ಯೋಜನೆಗಳಿಗೆ ಅನುಮೋದನೆ

New Project
Published on

Cabinet : ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ(ಜು.16) ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ದೇಶದ ಕೃಷಿ, ಇಂಧನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಪ್ರಮುಖ ಮೂರು ನಿರ್ಧಾರಗಳಿಗೆ ಅನುಮೋದನೆ ನೀಡಲಾಗಿದೆ.

ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಗೆ 24 ಸಾವಿರ ಕೋಟಿ ರೂ. ಮತ್ತು ಹಸಿರು ಇಂಧನಕ್ಕೆ 27 ಸಾವಿರ ಕೋಟಿ ರೂ. ಖರ್ಚು ಮಾಡಲು ಸಂಪುಟ ಸಭೆ ಅನುಮೋದನೆ ನೀಡಿದೆ.

2025-26ರಿಂದ 6 ವರ್ಷಗಳ ಅವಧಿಗೆ ‘ಪ್ರಧಾನ ಮಂತ್ರಿ ಧನ್-ಧನ್ಯ ಕೃಷಿ ಯೋಜನೆ’ಗೆ ಸಂಪುಟ ಸಭೆ ಅನುಮೋದಿಸಿದೆ. 100 ಕೃಷಿ ಜಿಲ್ಲೆಗಳನ್ನ ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಗುರಿಯಾಗಿದೆ. ಈ ಯೋಜನೆ ನೀತಿ ಆಯೋಗ ಕಾರ್ಯಕ್ರಮದಿಂದ ಪ್ರೇರಿತವಾಗಿ ನಿರ್ಧಿಷ್ಟವಾಗಿ ಕೃಷಿ ಸಂಬಂಧಿತ ವಲಯಗಳಿಗೆ ಮಾತ್ರ ಕೇಂದ್ರೀಕರಿಸುತ್ತದೆ.

ಫ್ರಧಾನ ಮಂತ್ರ ಧನ-ಧಾನ್ಯ ಕೃಷಿ ಯೋಜನೆ(PMDDKY)

ದೇಶದಲ್ಲಿ ಕೃಷಿ ಉತ್ಪಾದನೆಯನ್ನ ಹೆಚ್ಚಿಸುವುದು, ಬೆಳೆ ವೈವಿಧ್ಯತೆಯನ್ನ ಪ್ರೋತ್ಸಾಹಿಸುವುದು, ಸುಸ್ಥಿರ ಕೃಷಿ ಆಯ್ಕೆಗಳನ್ನ ಅಳವಡಿಸಿಕೊಳ್ಳುವುದು, ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ಸಂಗ್ರಹಣಾ ಸೌಲಭ್ಯಗಳನ್ನ ಹೆಚ್ಚಿಸುವುದು ಹಾಗೂ ನೀರಾವರಿ ವ್ಯವಸ್ಥೆ ಸುಧಾರಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಈ ಯೋಜನೆ 11 ಸಚಿವಾಲಯಗಳ 36 ಯೋಜನೆಗಳ ಮೂಲಕ ಕಾರ್ಯಗತಗೊಳಿಸುತ್ತದೆ. ರಾಜ್ಯ ಸರ್ಕಾರ & ಖಾಸಗಿ ವಲಯದ ಸಹ ಭಾಗಿತ್ವದ ಯೋಜನೆಗಳು ಸಹ ಸೇರಿವೆ. ದೇಶಾದ್ಯಂತ ಒಟ್ಟು 100 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿ ಉದ್ದೇಶವಾಗಿದೆ.

ಇಂಧನ ಹೂಡಿಕೆಗಾಗಿ NTPCಗೆ 20 ಸಾವಿರ ಕೋಟಿ ರೂ.

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೆಚ್ಚುವರಿಯಾಗಿ 20 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. 2032ರ ವೇಳೆಗೆ 60 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯ ವೃದ್ಧಿಸಲು NTPC ಗ್ರೀನ್​ ಎನರ್ಜಿ ಲಿಮಿಟೆಡ್​ಗೆ ಹೂಡಿಕೆ ಮಾಡಲು ಅನುಮತಿ ನೀಡಿದೆ.

NLCILಗೂ ನವೀಕರಿಸಬಹದಾದ ಇಂಧನ ಯೋಜನೆಗಳಲ್ಲಿ ಹೂಡಿಕೆ ಮಾಡಲು 7 ಸಾವಿರ ಕೋಟಿ ಹೂಡಿಕೆ ಮಾಡಲು ಅನುಮೋದನೆ ನೀಡಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net