'ಉದಯಪುರ ಫೈಲ್ಸ್'; ಸಿನಿಮಾ ಬಿಡುಗಡೆಗೆ ಕೇಂದ್ರದ ನಿರ್ಧಾರ ಮುಖ್ಯ; ಸುಪ್ರೀಂ ಕೋರ್ಟ್| udaipur-files

udaipur-files
Published on

ನವದೆಹಲಿ : ಉದಯ್ ಪುರ್​ನಲ್ಲಿ ನಡೆದಿದ್ದ ಟೈಲರ್ ಕನ್ಹಯ್ಯ ಲಾಲ್ ತೇಲಿಯ ಹತ್ಯೆ ಪ್ರಕರಣವನ್ನು ಆಧರಿಸಿ ನಿರ್ಮಿಸಲಾಗಿರುವ ‘ಉದಯ್ ಪುರ್ ಫೈಲ್ಸ್’ ಚಿತ್ರದ ಬಿಡುಗಡೆಗೆ ದಿಲ್ಲಿ ಹೈಕೋರ್ಟ್ ನೀಡಿರುವ ತಡೆಯನ್ನು ತೆರವುಗೊಳಿಸಲು ಇಂದು (16) ಸುಪ್ರೀಂ ಕೋರ್ಟ್ ನಿರಾಕರಿಸಿದೆ. 'ಉದಯಪುರ ಫೈಲ್ಸ್' ನಿರ್ಮಾಪಕರು ಕೇಂದ್ರದ ನಿರ್ಧಾರಕ್ಕಾಗಿ ಕಾಯುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಮಾಲಾ ಜಾಯ್ ಅವರನ್ನೊಳಗೊಂಡ ಬಾಗ್ನಿ ನ್ಯಾಯಪೀಠವು ಚಿತ್ರತಂಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದೆ. ಜು.11 ರಂದು 'ಉದಯ್‌ಪುರ್ ಫೈಲ್ಸ್' ಚಿತ್ರ ಬಿಡುಗಡೆ ಆಗಬೇಕಿತ್ತು. ಆದರೆ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ದೆಹಲಿ ಹೈಕೋರ್ಟ್‌ಗೆ ಜಮಿಯತ್ ಉಲೇಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ, ಪತ್ರಕರ್ತ ಪ್ರಶಾಂತ್ ಟಂಡನ್ ಅರ್ಜಿ ಸಲ್ಲಿಸಿದ್ದರು.

(ಏಜೆನ್ಸೀಸ್)

ಚಲನಚಿತ್ರದ ಕುರಿತು ಕೇಳಿ ಬಂದಿರುವ ಆಕ್ಷೇಪಗಳು ಕುರಿತು ನಿರ್ಧರಿಸಲು ರಚಿಸಲಾಗಿರುವ ಸಮಿತಿಯು, ಈ ಕುರಿತು ತಕ್ಷಣವೇ ನಿರ್ಧಾರ ಕೈಗೊಳ್ಳಬೇಕು ಎಂದೂ ನ್ಯಾಯಾಲಯ ನಿರ್ದೇಶನ ನೀಡಿದೆ. ವಿಚಾರಣೆಯನ್ನು ಮುಂದೂಡುವುದು ಮತ್ತು ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ ವಿಚಾರಣೆಯ ಫಲಿತಾಂಶಕ್ಕಾಗಿ ಕಾಯುವುದು ಸೂಕ್ತವೆಂದು ನಾವು ಪರಿಗಣಿಸುತ್ತೇವೆ ಎಂದು ನ್ಯಾಯಪೀಠ ಹೇಳಿದೆ. ಚಿತ್ರದ ವಿಚಾರಣೆಯನ್ನು ಜುಲೈ 21 ರವರೆಗೆ ಮುಂದೂಡಲಾಗಿದೆ.

ಚಿತ್ರ ಬಿಡುಗಡೆಗೆ ತಡೆ ನೀಡಿದ ದೆಹಲಿ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ನಿರ್ಮಾಪಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net