ಕಾಳಿ ಮಾತೆಯನ್ನು ಒಲಿಸೋದಕ್ಕಾಗಿ ನಾಲಿಗೆಯನ್ನೇ ಕತ್ತರಿಸಿ ಪೂಜೆಗಿಟ್ಟ!

kali maa
Published on

ಬಂಡಾ (ಉತ್ತರಪ್ರದೇಶ): ಬಬೇರು ಪ್ರದೇಶದ ಭಾತಿ ಗ್ರಾಮದಲ್ಲಿ 22 ವರ್ಷದ ಯುವಕನೊಬ್ಬ ಕಾಳಿ ಮಾತೆಯನ್ನು ಒಲಿಸುವುದಕ್ಕಾಗಿ ತನ್ನ ನಾಲಿಗೆಯನ್ನೇ ಕತ್ತರಿಸಿ ಪೊಜೆಗೆ ಇರಿಸಿದ ವಿಲಕ್ಷಣ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಯುವಕನನ್ನು ಆತ್ಮಾ ರಾಮ ಎಂದು ಗುರುತಿಸಲಾಗಿದೆ. ಶನಿವಾರ ಬೆಳಗ್ಗೆ ಸ್ಥಳೀಯ ದೇವಸ್ಥಾನಕ್ಕೆ ಬಂದಿದ್ದ ಆತ ಎಲ್ಲರೂ ನೋಡು ನೋಡುತ್ತಿದ್ದಂತೆಯೇ ತನ್ನ ನಾಲಿಗೆಯನ್ನು ಕತ್ತರಿಸಿ ದೇವಿಯ ಎದುರು ಇಟ್ಟುಬಿಟ್ಟಿದ್ದ. ಆತ್ಮಾರಾಮನ ವಿಲಕ್ಷಣ ಮಾನಸಿಕತೆ ನೋಡಿ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಾರಾಮನ ತಂದೆ ರಾಮಸಿಂಗ್​ ಪೊಲೀಸರಿಗೆ ತಿಳಿಸಿದ ಮಾಹಿತಿ ಪ್ರಕಾರ, ಆತ ಕಳೆದ 9 ದಿನಗಳಿಂದ ಉಪವಾಸವಿದ್ದು, ದೇವಿಯ ಆರಾಧನೆ ಮಾಡಿದ್ದ. ಅವನು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ. ಕೆಲವರು ಅವನ ಮಾನಸಿಕಾವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು, ಈ ರೀತಿ ವರ್ತಿಸುವಂತೆ ಮಾಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net