ಪತ್ನಿಯ ರಕ್ತಸಿಕ್ತ ರುಂಡ ಹಿಡಿದು ಪೊಲೀಸ್​ ಠಾಣೆಗೆ ಹೋಗಿ ಶರಣಾದ ಭೂಪ...

Man Cut
Published on

ಬಾಂದಾ: ಪತ್ನಿಯ ತಲೆ ಕಡಿದ ವ್ಯಕ್ತಿ, ಆ ರುಂಡವನ್ನು ಕೈಯಲ್ಲಿ ಹಿಡಿದುಕೊಂಡೇ ಪೊಲೀಸ್ ಸ್ಟೇಶನ್​ಗೆ ಹೋಗಿ ಶರಣಾದ ಭಯಾನಕ ಘಟನೆ ಉತ್ತರ ಪ್ರದೇಶದ ಬಾಂದಾದಲ್ಲಿ ನಡೆದಿದೆ.

ಆರೋಪಿ ಚಿನ್ನಾರ್​ ಯಾದವ್​ಗೆ ತನ್ನ ಪತ್ನಿ ವಿಮಲಾ ಶೀಲದ ಮೇಲೆ ಶಂಕೆ. ಆಕೆ ತನಗೆ ದ್ರೋಹ ಮಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಬಾಂದಾದ ನೇತಾನಗರದ ನಿವಾಸಿಗಳಾದ ಈ ದಂಪತಿಯ ಮಧ್ಯೆ ಪದೇಪದೆ ಜಗಳ ಆಗುತ್ತಿತ್ತು. ಹಾಗೇ ಇಂದು ಮುಂಜಾನೆ 7.30 ಸುಮಾರಿಗೆ ಶುರುವಾದ ಜಗಳ, ಮಹಿಳೆಯ ಹತ್ಯೆಯೊಂದಿಗೆ ಅಂತ್ಯವಾಯಿತು.

ಚಿನ್ನಾರ್​ ಯಾದವ್​ ಕೋಪ ತಾರಕಕ್ಕೆ ಏರಿ ಪತ್ನಿಯ ತಲೆ ಕತ್ತರಿಸಿದ್ದಾನೆ. ಆ ತಲೆಯನ್ನು ಹಿಡಿದುಕೊಂಡೇ ಶರಣಾಗಲು ಠಾಣೆಗೆ ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಿತ್ರರಾಷ್ಟ್ರ ಚೀನಾಕ್ಕೆ ‘ಟಿಕ್​ಟಾಕ್’​ ಶಾಕ್​ ನೀಡಿದ ಪಾಕಿಸ್ತಾನ ಸರ್ಕಾರ

ಹಾಗೇ ಚಿನ್ನಾರ್​ ಯಾದವ್​ ಪತ್ನಿಯ ರುಂಡ ಹಿಡಿದು ರಸ್ತೆಯಲ್ಲಿ ಹೋಗುತ್ತಿರುವ ವಿಡಿಯೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿವೆ.  ಚಿನ್ನಾರ್​ನನ್ನು ಅರೆಸ್ಟ್ ಮಾಡಿರುವ ಪೊಲಿಸರು ಆತನಿಂದ ಮಾರಕ ಅಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net