

ಲಖನೌ: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 10 ತಿಂಗಳ ಹಿಂದೆ ಚಾಲಕನೊಬ್ಬ ನಾಪತ್ತೆಯಾಗಿದ್ದ.. ಪೊಲೀಸರು ಎಷ್ಟೇ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಆದರೆ.. ಮೊಬೈಲ್ ಫೋನ್ ನಿಜವಾದ ರಹಸ್ಯವನ್ನು ಬಹಿರಂಗಪಡಿಸಿತು. ಇದೀಗ ಆತನ ನಾಪತ್ತೆ ಹಿಂದಿನ ಕಾರಣ ಬಯಲಾಗಿದೆ.
10 ತಿಂಗಳಿಂದ ಆಫ್ ಆಗಿದ್ದ ಫೋನ್.. ಈಗ ಆನ್ ಆಗಿತ್ತು. ನಾಪತ್ತೆಯಾಗಿದ್ದ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಮೊಬೈಲ್ ಫೋನ್ ಸಿಕ್ಕ ಬಳಿಕ ಪತ್ತೆಯಾಯಿತು. ಈ ಬಗ್ಗೆ ಪೊಲೀಸರು ನೀಡಿರುವ ವಿವರ ಇಂತಿದೆ.
ಹತ್ರಾಸ್ ಗೇಟ್ ಪ್ರದೇಶದ ಸಾಕೇತ್ ಕಾಲೋನಿಯ 40 ವರ್ಷದ ಅಜಯ್ ಸಣ್ಣಪುಟ್ಟ ವಾಹನಗಳನ್ನು ಓಡಿಸಿ ಜೀವನ ನಡೆಸುತ್ತಿದ್ದ, ಆದರೆ, 2023ರ ಜುಲೈ 16ರಂದು ಆತ ಮಥುರಾಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟವನು ವಾಪಸ್ ಬಂದಿರಲಿಲ್ಲ. ಕುಟುಂಬಸ್ಥರು ಎಷ್ಟೇ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಕಡೆಗೆ ಸೆ.5 ರಂದು, ಕೊತ್ವಾಲಿ ಹತ್ರಾಸ್ ಗೇಟ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು.
ಬಳಿಕ ನಾಪತ್ತೆಯಾಗಿದ್ದ ಅಜಯ್ ಬಗ್ಗೆ ಪೊಲೀಸರು ಹುಡುಕಾಟ ನಡೆಸಿದರೂ ಅಜಯ್‌ನ ಯಾವುದೇ ಕುರುಹು ಪತ್ತೆಯಾಗಲಿಲ್ಲ. ಪ್ರಕರಣವೂ ರಹಸ್ಯವಾಗಿಯೇ ಉಳಿಯಿತು.
ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಲಿಲ್ಲ. ಇತ್ತೀಚೆಗೆ ಅಜಯ್ ಫೋನ್ ಆನ್ ಆಗಿದ್ದು, ಕೂಡಲೇ ಪೊಲೀಸರು ಎಚ್ಚೆತ್ತುಕೊಂಡರು. ಕೂಡಲೇ ಲೋಕೇಶ್ ಮೊಬೈಲ್ ಬಳಸುತ್ತಿದ್ದ ಯುವಕನನ್ನು ಪತ್ತೆ ಹಚ್ಚಿ ಬಂಧಿಸಿದರು. ಠಾಣೆಯಲ್ಲಿ ತಮ್ಮದೇ ಶೈಲಿಯಲ್ಲಿ ವಿಚಾರಿಸಿದಾಗ ಸತ್ಯ ಬಯಲಾಯಿತು.
ಅಜಯ್ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದರಲ್ಲಿ ಮೊಬೈಲ್ ಬಳಸುತ್ತಿದ್ದ ಯುವಕನ ಪಾತ್ರವೂ ಇತ್ತು. ಅಜಯ್‌ನನ್ನು ಕೊಂದು ಶವವನ್ನು ಆಗ್ರಾದಲ್ಲಿ ಎಸೆದಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದ. ಆತ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಶವವನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲದ ಕಾರಣ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ.